ADVERTISEMENT

ನೈಜೀರಿಯಾ: 28 ಮಂದಿ ಸಾವು

​ಪ್ರಜಾವಾಣಿ ವಾರ್ತೆ
Published 21 ಜನವರಿ 2012, 19:30 IST
Last Updated 21 ಜನವರಿ 2012, 19:30 IST

ಅಬುಜಾ (ಪಿಟಿಐ): ನೈಜೀರಿಯಾದ ಕನೊ ನಗರದಲ್ಲಿ ಇಸ್ಲಾಂ ಉಗ್ರರು ನಡೆಸಿದ ಸರಣಿ ಬಾಂಬ್ ಮತ್ತು ಗುಂಡಿನ ದಾಳಿಗಳಲ್ಲಿ ಪೊಲೀಸರು ಸೇರಿದಂತೆ 28 ಜನ ಸಾವಿಗೀಡಾಗಿದ್ದಾರೆ. ಭಾರತೀಯರೂ ಸೇರಿ ಹಲವು ಮಂದಿ ಗಾಯಗೊಂಡಿದ್ದಾರೆ.

ಸ್ಥಳದಲ್ಲಿ 24 ಗಂಟೆಗಳ ಕಾಲ ಕರ್ಫ್ಯೂ ವಿಧಿಸಲಾಗಿದೆ. ನಾಲ್ಕು ಪೊಲೀಸ್ ಠಾಣೆಗಳು, ಬೇಹುಗಾರಿಕಾ ಮುಖ್ಯ ಕಚೇರಿ, ಭದ್ರತಾ ಇಲಾಖೆ ಮತ್ತು ವಲಸೆ ಇಲಾಖೆ ಕಚೇರಿ ಮೇಲೆ ದಾಳಿಗಳು ನಡೆದಿವೆ. ಬೋಕೊ ಹರಾಮ್ ಸಂಘಟನೆಯು ಘಟನೆಯ ಹೊಣೆ ಹೊತ್ತುಕೊಂಡಿದೆ. ವಿವಿಧ ಜೈಲುಗಳಲ್ಲಿರುವ ತಮ್ಮ ಹಲವಾರು ಸದಸ್ಯರನ್ನು ಬಿಡುಗಡೆ ಮಾಡಲು ಸರ್ಕಾರ ನಿರಾಕರಿಸಿದ್ದೇ ದಾಳಿಗೆ ಕಾರಣ ಎಂದು ಸಂಘಟನೆಯ ವಕ್ತಾರ ಅಬುಲ್ ಖಖಾ ಹೇಳಿದ್ದಾನೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.