
ಪ್ರಜಾವಾಣಿ ವಾರ್ತೆವಾಷಿಂಗ್ಟನ್, (ಪಿಟಿಐ): ಭಾರತ ಮತ್ತು ಬ್ರೆಜಿಲ್ ಶಕ್ತಿಶಾಲಿ ರಾಷ್ಟ್ರಗಳಾಗಿರುವ ಹಿನ್ನೆಲೆಯಲ್ಲಿ ಅವುಗಳನ್ನು ನ್ಯಾಟೊ ಪಡೆಗೆ ಸೇರಿಸಿಕೊಳ್ಳುವ ಸಾಧ್ಯತೆಯನ್ನು ಪರಿಶೀಲಿಸಬೇಕೆಂದು ಪೆಂಟಗಾನ್‌ನ ಹಿರಿಯ ಕಮಾಂಡರ್ ಒಬ್ಬರು ಅಮೆರಿಕದ ನೀತಿ ನಿರೂಪಕರಿಗೆ ತಿಳಿಸಿದ್ದಾರೆ.
`ಈ ಎರಡೂ ರಾಷ್ಟ್ರಗಳು ನ್ಯಾಟೊದೊಂದಿಗೆ ಉತ್ತಮವಾಗಿ ಕಾರ್ಯ ನಿರ್ವಹಿಸಬಲ್ಲವು~ ಎಂದು ಅಡ್ಮಿರಲ್ ಜೇಮ್ಸ ಸ್ಟಾವ್‌ರಿಡಿಸ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪೆಂಟಗಾನ್‌ನ ಹಿರಿಯ ಕಮಾಂಡರ್ ಒಬ್ಬರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದು, ಇದೇ ಮೊದಲ ಬಾರಿಯಾಗಿದೆ.
ನ್ಯಾಟೊ ಪಡೆ ವಿಸ್ತರಣೆಗೆ 4 ಆದ್ಯತೆಗಳನ್ನು ಮುಂದಿಟ್ಟಿದ್ದು, ಅವುಗಳಲ್ಲಿ ಇದು ಕಟ್ಟ ಕಡೆಯದು ಎಂದು ಸ್ಟಾವ್‌ರಿಡಿಸ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.