ADVERTISEMENT

ನ್ಯಾಯಾಲಯಕ್ಕೆ ಗೈರಾದ ನವಾಜ್‌ ಷರೀಫ್‌

ಪಿಟಿಐ
Published 9 ಅಕ್ಟೋಬರ್ 2017, 19:30 IST
Last Updated 9 ಅಕ್ಟೋಬರ್ 2017, 19:30 IST
ನವಾಜ್‌ ಷರೀಫ್‌
ನವಾಜ್‌ ಷರೀಫ್‌   

ಇಸ್ಲಾಮಾಬಾದ್‌: ಪಾಕಿಸ್ತಾನದ ಪದಚ್ಯುತ ಪ್ರಧಾನಿ ನವಾಜ್‌ ಷರೀಫ್‌ ಅವರು ಪನಾಮ ಪೇಪರ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ವಿಚಾರಣೆಗೆ ಗೈರಾದರು.

ಇದೇ ಪ್ರಕರಣದಲ್ಲಿ ನ್ಯಾಯಾಲಯದ ಮುಂದೆ ಹಾಜರಾ ಗುವ ಸಂಬಂಧ ಷರೀಫ್‌ ಮಗಳು ಮರಿಯಂ ನವಾಜ್‌ ಹಾಗೂ ಆಕೆಯ ಪತಿ, ಮಾಜಿ ಸೇನಾಧಿಕಾರಿ ಮೊಹಮ್ಮದ್‌ ಸಪ್ದರ್ ಭಾನುವಾರ ರಾತ್ರಿ ಲಂಡನ್‌ನಿಂದ ಇಸ್ಲಾಮಾಬಾದ್‌ಗೆ ಬಂದಿಳಿದಿದ್ದರು. ಆದರೆ ಸಪ್ದರ್‌ ವಿರುದ್ಧ ನ್ಯಾಯಾಲಯವು ಈಗಾಗಲೇ ಜಾಮೀನುರಹಿತ ವಾರಂಟ್‌ ಹೊರಡಿಸಿದ್ದರಿಂದ, ವಿಮಾನ ನಿಲ್ದಾಣದಲ್ಲಿ ಅವರನ್ನು ಬಂಧಿಸಲಾಗಿತ್ತು.

ಸೋಮವಾರ ಮರಿಯಂ ಹಾಗೂ ಸಪ್ದರ್‌ ಅವರು ಪ್ರತ್ಯೇಕವಾಗಿ ನ್ಯಾಯಾಲಯಕ್ಕೆ ಹಾಜರಾದರು. ಅ .13 ರಂದು ಮತ್ತೆ ವಿಚಾರಣೆ ನಡೆಯಲಿದ್ದು, ಷರೀಫ್ ವಿರುದ್ಧ ದೋಷಾರೋಪ ಹೊರಿಸ‌ಲಾಗುವುದು ಎಂದು ನ್ಯಾಯಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.