
ಪ್ರಜಾವಾಣಿ ವಾರ್ತೆವಾಷಿಂಗ್ಟನ್ (ಪಿಟಿಐ): ಪ್ರಜೆಗಳಿಗೆ ನ್ಯಾಯ ಪಡೆಯುವ ಅವಕಾಶ ಕಲ್ಪಿಸಿದ ವಿಶ್ವದ 97 ದೇಶಗಳಲ್ಲಿ ಭಾರತ 78ನೇ ಸ್ಥಾನದಲ್ಲಿದೆ.
`ದಕ್ಷಿಣ ಏಷ್ಯಾ ರಾಷ್ಟ್ರಗಳ ಪೈಕಿ ಶ್ರೀಲಂಕಾ ಈ ವಿಷಯದಲ್ಲಿ ಮುಂಚೂಣಿಯಲ್ಲಿದೆ' ಎಂದು ವಿಶ್ವ ನ್ಯಾಯ ಯೋಜನೆ ಸಿದ್ಧಪಡಿಸಿದ `2012ರ ಕಾನೂನು ಆಡಳಿತ' ವರದಿಯಲ್ಲಿ ಹೇಳಲಾಗಿದೆ.
`ಭಾರತದಲ್ಲಿ ಸ್ವತಂತ್ರ ನ್ಯಾಯಾಂಗ ವ್ಯವಸ್ಥೆಯಿದೆ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಾಕಷ್ಟು ಅವಕಾಶವಿದೆ. ಅಲ್ಲದೇ ಇತರ ದೇಶಗಳಿಗೆ ಹೋಲಿಸಿದರೆ ಮುಕ್ತ ಸರ್ಕಾರ ಇದೆ' ಎಂದು ವರದಿಯಲ್ಲಿ ವಿವರಿಸಲಾಗಿದೆ.
ಭಾರತವು ಆಡಳಿತಾತ್ಮಕ ಸಂಸ್ಥೆಗಳ ಕಾರ್ಯ ವೈಖರಿಯಲ್ಲಿ 79ನೇ ಸ್ಥಾನ, ಸಿವಿಲ್ ಕೋರ್ಟ್ ವ್ಯವಸ್ಥೆಯಲ್ಲಿ 78ನೇ ಸ್ಥಾನ ಹಾಗೂ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ 83ನೇ ಸ್ಥಾನದಲ್ಲಿ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.