ADVERTISEMENT

ನ್ಯಾಷನಲ್ ಜಿಯಾಗ್ರಫಿಕ್ ಬೀ ಸ್ಪರ್ಧೆ:ಭಾರತೀಯರ ಸಾಧನೆ

​ಪ್ರಜಾವಾಣಿ ವಾರ್ತೆ
Published 25 ಮೇ 2012, 19:30 IST
Last Updated 25 ಮೇ 2012, 19:30 IST

ವಾಷಿಂಗ್ಟನ್ (ಪಿಟಿಐ): ಅಮೆರಿಕದ ಪ್ರತಿಷ್ಠಿತ `ನ್ಯಾಷನಲ್ ಜಿಯಾಗ್ರಫಿಕ್ ಬೀ~ ಸ್ಪರ್ಧೆಯಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಗಳು ಮೊದಲ ನಾಲ್ಕು ಸ್ಥಾನ ಗಳಲ್ಲಿ ಉತ್ತೀರ್ಣರಾಗಿದ್ದಾರೆ.ಗುರುವಾರ ನಡೆದ ಅಂತಿಮ ಪರೀಕ್ಷೆಯಲ್ಲಿ ಟೆಕ್ಸಾಸ್‌ನ ರಾಹುಲ್ ನಾಗ್ವೇಕರ್ (14) ಅವರು ವಿಸ್ಕೊನ್ಸಿನ್‌ನ   ವಂಶ್ ಜೈನ್ (13) ಅವರನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆದಿದ್ದಾರೆ. ಇವ ರಿಬ್ಬರೂ 8ನೇ ತರಗತಿ ವಿದ್ಯಾರ್ಥಿಗಳು.

ಸ್ಯಾನ್‌ಫ್ರಾನ್ಸಿಸ್ಕೊದ ವರುಣ್ ಮಹಾದೇವನ್ (13), ಅರಿಜೋನಾದ ರಾಘವ್ ರಂಗ (14) ಕ್ರಮವಾಗಿ 3 ಹಾಗೂ 4ನೇ ಸ್ಥಾನ ಪಡೆದುಕೊಂಡಿದ್ದಾರೆ.ನಾಗ್ವೇಕರ್ ಅವರು 25,000 ಡಾಲರ್ ಸ್ಕಾಲರ್‌ಷಿಪ್ ಪಡೆಯುವುದರ ಜತೆಗೆ ನ್ಯಾಷನಲ್ ಜಿಯಾಗ್ರಫಿಕ್ ಸೊಸೈಟಿಯ ಕಾಯಂ ಸದಸ್ಯತ್ವ ಪಡೆದುಕೊಂಡಿದ್ದಾರೆ. ಎರಡನೇ ಸ್ಥಾನ ಪಡೆದುಕೊಂಡಿರುವ ಜೈನ್ ಅವರಿಗೆ 15,000 ಡಾಲರ್ ಸ್ಕಾಲರ್‌ಷಿಪ್ ದೊರೆಯಲಿದೆ. ಮಹಾದೇವನ್ ಹಾಗೂ ರಂಗ ಕ್ರಮವಾಗಿ 10,000 ಡಾಲರ್ ಮತ್ತು 1,000 ಡಾಲರ್ ಸ್ಕಾಲರ್‌ಷಿಪ್ ಪಡೆಯಲಿದ್ದಾರೆ.

ಗೆಲುವು ತಂದುಕೊಟ್ಟ ಪ್ರಶ್ನೆ
`ಡೆನುಬ್ ನದಿ ದಂಡೆಯ ಮೇಲೆ ಇರುವ ಬವೆರಿಯ ನಗರ ಯಾವುದು?~
ನಾಗ್ವೇಕರ್ ನೀಡಿದ ಸರಿ ಉತ್ತರ:ರೆಗೆನ್ಸ್‌ಬರ್ಗ್.

ಈ ಬಾರಿ ಅಧ್ಯಕ್ಷ ಬರಾಕ್ ಒಬಾಮ ಅವರು ವಿಡಿಯೊ ಮೂಲಕ ಪರೀಕ್ಷಾರ್ಥಿಗಳಿಗೆ ಒಂದು ಪ್ರಶ್ನೆ ಕೇಳಿದ್ದರು.
`ಮಾರ್ಚ್ ತಿಂಗಳಿನಲ್ಲಿ ಪರಮಾಣು ಭದ್ರತೆಗೆ ಸಂಬಂಧಿಸಿದ ಶೃಂಗಸಭೆ ಯಾವ ನಗರದಲ್ಲಿ ನಡೆದಿತ್ತು?~- `ಸೋಲ್~ ಎನ್ನುವುದು ಸರಿಯಾದ ಉತ್ತರ.

`ಭೂಪಟದಲ್ಲಿರುವ ಸ್ಥಳಗಳನ್ನು ಗುರುತಿಸಿದರೆ ಮಾತ್ರ ಸಾಲದು; ಭೌಗೋಳಿಕ ಅಧ್ಯಯನ ಅದಕ್ಕಿಂತಲೂ ಮಿಗಿಲಾದುದು~ ಎಂದು ಒಬಾಮ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.