ADVERTISEMENT

ನ್ಯುಮೋನಿಯ, ಅತಿಸಾರದಿಂದ ಮಕ್ಕಳ ಸಾವು ಏರಿಕೆ: ಯುನಿಸೆಫ್

​ಪ್ರಜಾವಾಣಿ ವಾರ್ತೆ
Published 8 ಜೂನ್ 2012, 19:30 IST
Last Updated 8 ಜೂನ್ 2012, 19:30 IST

ವಿಶ್ವಸಂಸ್ಥೆ (ಎಎಫ್‌ಪಿ): ವಿಶ್ವದಾದ್ಯಂತ ಬಡ ಮಕ್ಕಳ ಸಾವಿಗೆ ನ್ಯುಮೋನಿಯ ಮತ್ತು ಅತಿಸಾರ ಪ್ರಮುಖ ಕಾರಣವಾಗಿವೆ ಎಂದು ವಿಶ್ವಸಂಸ್ಥೆಯ ಮಕ್ಕಳ ನಿಧಿ (ಯುನಿಸೆಫ್) ಶುಕ್ರವಾರ ತಿಳಿಸಿದೆ.

ಈ ಕಾಯಿಲೆಗಳಿಂದ ಪ್ರಪಂಚದಾದ್ಯಂತ ಅಸು ನೀಗುತ್ತಿರುವ ಮಕ್ಕಳಲ್ಲಿ ಅರ್ಧದಷ್ಟು ಪಾಲು ಕೇವಲ ಐದು ದೇಶಗಳದ್ದಾಗಿದ್ದು, ಅವುಗಳನ್ನು ಭಾರತ, ನೈಜಿರಿಯಾ, ಕಾಂಗೊ, ಪಾಕಿಸ್ತಾನ ಹಾಗೂ ಇಥಿಯೋಪಿಯಾ ಎಂದು ಗುರುತಿಸಲಾಗಿದೆ.

ಜಗತ್ತಿನಾದ್ಯಂತ ವಿವಿಧ ಕಾರಣಗಳಿಂದ ಸಾಯುತ್ತಿರುವ ಮಕ್ಕಳ ಪೈಕಿ ಶೇ 29ರಷ್ಟು ಮಕ್ಕಳು ಈ ಮಾರಕ ರೋಗಗಳಿಗೆ ಬಲಿಯಾಗುತ್ತಿದ್ದಾರೆ. ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವುದರಿಂದ ಮುಂದಿನ ದಿನಗಳಲ್ಲಿ ಈ ರೋಗಗಳಿಂದ ಸಾವಿನ ಪ್ರಮಾಣವನ್ನು ತಗ್ಗಿಸಬಹುದು ಎಂದು ವರದಿ ತಿಳಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.