ADVERTISEMENT

ನ್ಯೂಯಾರ್ಕ್‌ ಪೊಲೀಸ್‌ ಇಲಾಖೆಗೆ ಮೊದಲ ಸಿಖ್‌ ಮಹಿಳೆ

ಪಿಟಿಐ
Published 20 ಮೇ 2018, 19:48 IST
Last Updated 20 ಮೇ 2018, 19:48 IST
ನ್ಯೂಯಾರ್ಕ್‌ ಪೊಲೀಸ್‌ ಇಲಾಖೆಗೆ ಮೊದಲ ಸಿಖ್‌ ಮಹಿಳೆ
ನ್ಯೂಯಾರ್ಕ್‌ ಪೊಲೀಸ್‌ ಇಲಾಖೆಗೆ ಮೊದಲ ಸಿಖ್‌ ಮಹಿಳೆ   

ನ್ಯೂಯಾರ್ಕ್‌: ನ್ಯೂಯಾರ್ಕ್‌ ಪೊಲೀಸ್‌ ಇಲಾಖೆಯ (ವೈಎನ್‌ಪಿಡಿ) ಸಹಾಯಕ ಪೊಲೀಸ್‌ ಅಧಿಕಾರಿಯಾಗಿ (ಎಪಿಒ) ಗುರ್‌ಸೋಚ್‌ ಕೌರ್‌ ಆಯ್ಕೆಯಾಗಿದ್ದಾರೆ. ಈ ಇಲಾಖೆಯಲ್ಲಿ ಕಾರ್ಯ ನಿರ್ವಹಿಸಲಿರುವ ಮೊದಲ ಸಿಖ್‌ ಮಹಿಳೆ ಇವರು.

ನ್ಯೂಯಾರ್ಕ್‌ ನಗರ ಪೊಲೀಸ್‌ ಅಕಾಡೆಮಿಯಲ್ಲಿ ಕಳೆದ ವಾರವಷ್ಟೇ ಕೌರ್‌ ಪದವಿ ಪೂರೈಸಿದ್ದಾರೆ. ‘ಮೊದಲ ಮಹಿಳಾ ಸಿಖ್‌ ಅಧಿಕಾರಿಯನ್ನು ಇಲಾಖೆಗೆ ಸ್ವಾಗತಿಸಲು ಹೆಮ್ಮೆ ಯಾಗುತ್ತಿದೆ’ ಎಂದು ಸಿಖ್‌ ಅಧಿಕಾರಿಗಳ ಸಂಘ ಟ್ವೀಟ್‌ ಮಾಡಿದೆ.

‘ನಿಮ್ಮ ಈ ಸಾಧನೆ ಉಳಿದವರಿಗೂ ಸ್ಫೂರ್ತಿ ನೀಡುತ್ತದೆ. ಪೊಲೀಸ್‌ ಇಲಾಖೆಗೆ ಸೇರಲು ಪ್ರೇರೇಪಿಸುತ್ತದೆ’ ಎಂದು ಅದು ಶ್ಲಾಘಿಸಿದೆ. ವಸತಿ ಮತ್ತು ನಗರಾಭಿವೃದ್ಧಿ ಇಲಾಖೆಯ ರಾಜ್ಯ ಸಚಿವ ಹರ್‌ದೀಪ್‌ ಸಿಂಗ್ ಪುರಿ ಕೂಡ ಟ್ವೀಟ್‌ ಮಾಡಿದ್ದು, ‘ರುಮಾಲುಧಾರಿ ಸಿಖ್‌ ಮಹಿಳೆಯೊಬ್ಬರು ಪೊಲೀಸ್‌ ಇಲಾಖೆಯಲ್ಲಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುವುದರಿಂದ ಅಮೆರಿಕದಲ್ಲಿ ಸಿಖ್‌ ಧರ್ಮದ ಕುರಿತು ಅರಿವು ಹೆಚ್ಚಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ADVERTISEMENT

‘ನಾನು ಈ ಹಿಂದೆ ವಿಶ್ವಸಂಸ್ಥೆಗೆ ಭಾರತದ ರಾಯಭಾರಿಯಾಗಿದ್ದಾಗ  ಹ್ಯೂಸ್ಟನ್‌ ವಿಮಾನ ನಿಲ್ದಾಣದಲ್ಲಿ ಭದ್ರತಾ ಅಧಿಕಾರಿಗಳು ನನ್ನ ರುಮಾಲು (ಟರ್ಬನ್‌) ತೆಗೆಯಲು ಹೇಳಿದ್ದರು. ನಾನು ಇದನ್ನು ವಿರೋಧಿಸಿದಾಗ ನನ್ನನ್ನು ಅರ್ಧ ತಾಸು ಕಾಯುವಂತೆ ಮಾಡಿದ್ದರು’ ಎಂದು ಪುರಿ ನೆನಪಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.