ADVERTISEMENT

ಪಂಜಾಬ್ ಗವರ್ನರ್ ಪುತ್ರ ಹಣಕ್ಕಾಗಿ ಅಪಹರಣ: ಶಂಕೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2011, 19:30 IST
Last Updated 9 ಸೆಪ್ಟೆಂಬರ್ 2011, 19:30 IST

ಇಸ್ಲಾಮಾಬಾದ್ (ಪಿಟಿಐ):  ಪಂಜಾಬ್ ಪ್ರಾಂತ್ಯದ ಹತ್ಯೆಗೀಡಾದ ಗವರ್ನರ್ ಪುತ್ರ ಸಲ್ಮಾನ್ ತಸೀರ್  ಮತ್ತು ಅಮೆರಿಕದ ಸಮುದಾಯ ಸೇವಾ ಕಾರ್ಯಕರ್ತ ವಾರೆನ್ ವಿನ್‌ಸ್ಟನ್ ಅವರನ್ನು ಉಗ್ರರು ಅಪಹರಿಸಿಲ್ಲ ಎಂದು ಅಂದಾಜಿಸಲಾಗಿದೆ.

`ಬಹುಶಃ ಯಾವುದಾದರೂ ಸಂಘಟಿತ ಅಪಹರಣಕಾರರ ಕೈಗೆ ಇವರನ್ನು ಮಾರಾಟ ಮಾಡಿರಬಹುದಾದ ಸಾಧ್ಯತೆಯಿದೆ~ ಎಂದು ಪಾಕಿಸ್ತಾನದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶಂಕಿಸಿದ್ದಾರೆ.ಈ ಸಂಬಂಧದ ತನಿಖಾ ಕಾರ್ಯ ಕೊನೆಯ ಹಂತದಲ್ಲಿದೆ ಎಂದು   `ಎಕ್ಸ್‌ಪ್ರೆಸ್ ಟ್ರಿಬ್ಯೂನ್~ ವರದಿ ಮಾಡಿದೆ. ಯಾವ ನಿಷೇಧಿತ ಉಗ್ರರ ಸಂಘಟನೆ ಅಥವಾ ಗುಂಪು ಇವರನ್ನು ಅಪಹರಣ ಮಾಡಿದೆ ಎಂಬುದು ಇನ್ನೂ ತಿಳಿದು ಬಂದಿಲ್ಲ.

ಮೊದಲಿಗೆ ಇವರನ್ನು ಅಪಹರಿಸಿದ್ದವರು, ಇವರು ಉನ್ನತ ದರ್ಜೆಯ ವ್ಯಕ್ತಿಗಳು ಎಂಬುದು ತಿಳಿಯುತ್ತಲೇ ಹೆಚ್ಚಿನ ಹಣಕ್ಕಾಗಿ ಸಂಘಟಿತ ಅಪಹರಣಕಾರರಿಗೆ ಮಾರಾಟ ಮಾಡಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಶಂಕಿಸಿರುವುದಾಗಿ ಪತ್ರಿಕೆ ಹೇಳಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.