ADVERTISEMENT

ಪರಮಾಣು ಒಪ್ಪಂದಕ್ಕೆ ಸಿಂಗ್ ವಿರೋಧವಾಗಿದ್ದರೆ?

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2011, 19:30 IST
Last Updated 27 ಅಕ್ಟೋಬರ್ 2011, 19:30 IST

ವಾಷಿಂಗ್ಟನ್ (ಪಿಟಿಐ): ಭಾರತ , ಅಮೆರಿಕ ನಡುವಿನ ಪರಮಾಣು ಒಪ್ಪಂದಕ್ಕೆ ಸಹಿ ಹಾಕಲು ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಮನಸ್ಸಿರಲಿಲ್ಲ ಮತ್ತು ಈ ವಿಚಾರವಾಗಿ ಅವರು ಆಗಿನ ವಿದೇಶಾಂಗ ಕಾರ್ಯದರ್ಶಿ ಕಂಡೋಲಿಸಾ ರೈಸ್ ಅವರನ್ನು ಭೇಟಿ ಮಾಡಬಾರದು ಎಂದು ನಿರ್ಧರಿಸಿದ್ದರು.

ಒಪ್ಪಂದಕ್ಕೆ ಸಹಿ ಹಾಕುವುದಿಲ್ಲ ಎಂದು ಹೇಳಲು ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕೆ ರೈಸ್ ಅವರನ್ನು ಭೇಟಿ ಮಾಡದಿರಲು ಸಿಂಗ್ ನಿರ್ಧರಿಸಿದ್ದರು. ಆದರೆ ರೈಸ್  ಚಾಣಾಕ್ಷತನದಿಂದ ಕೊನೆಗೂ ಸಿಂಗ್ ಸಹಿ ಹಾಕಬೇಕಾಯಿತು. ತಮ್ಮ ಕೃತಿ `ನೋ ಹೈಯರ್ ಆನರ್~ನಲ್ಲಿ ರೈಸ್ ಈ ಬಗ್ಗೆ ಬರೆದುಕೊಂಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.