ADVERTISEMENT

ಪಾಕಿಸ್ತಾನ ಭಯೋತ್ಪಾದಕರ ತಾಣವಾಗದಿರಲಿ

​ಪ್ರಜಾವಾಣಿ ವಾರ್ತೆ
Published 6 ಜೂನ್ 2011, 19:30 IST
Last Updated 6 ಜೂನ್ 2011, 19:30 IST

ಇಸ್ಲಾಮಾಬಾದ್ (ಪಿಟಿಐ):  ಅಮೆರಿಕ ತನಗೆ ಬೇಕಾದ ಐವರು ಉಗ್ರರ ಪಟ್ಟಿ ನೀಡಿರುವ ಮತ್ತು ಪಾಕಿಸ್ತಾನ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿರುವುದನ್ನು ಪರೋಕ್ಷವಾಗಿ ಒಪ್ಪಿಕೊಂಡಿರುವ ಅಲ್ಲಿನ ಪ್ರಧಾನಿ ಯೂಸುಫ್ ರಜಾ ಗಿಲಾನಿ ಅವರು ಪಾಕಿಸ್ತಾನ ಬೇರೆ ದೇಶಗಳ ವಿರುದ್ಧ ಕಾರ್ಯಾಚರಣೆ ನಡೆಸುವ ಉಗ್ರರ ತಾಣವಾಗಬಾರದೆಂದು ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, `ಪಾಕ್‌ನಲ್ಲಿನ ಉಗ್ರರು ಮತ್ತು ಅಲ್‌ಖೈದಾದೊಂದಿಗೆ ನಿಕಟ ಸಂಪರ್ಕವಿರುವ ಬಗ್ಗೆ ಅಮೆರಿಕ ಸದಾ ಕಳವಳ ವ್ಯಕ್ತಪಡಿಸುತ್ತಿದೆ. ಭಯೋತ್ಪಾದನೆಗಾಗಿ ನಮ್ಮ ನೆಲವನ್ನು ಬಳಸಿಕೊಳ್ಳುವಂತಾಗಬಾರದೆಂದು ಆತಂಕ ನಮಗೂ ಇದೆ. ಅಮೆರಿಕ ಯಾವುದೇ ಪಟ್ಟಿಯ ಬಗ್ಗೆ ಮಾತನಾಡಿದರೆ, ಅಲ್‌ಖೈದಾಗೆ ಮಾತ್ರ ಸಂಬಂಧಿಸಿದಮಾಹಿತಿಗಳನ್ನೂ ಐಎಸ್‌ಐ ಹಂಚಿಕೊಳ್ಳಲಿದೆ~ ಎಂದು ಹೇಳಿದರು.

ಅಮೆರಿಕ ಸಲ್ಲಿಸಿರುವ ಉಗ್ರರ ಪಟ್ಟಿಯಲ್ಲಿ ಇಲ್ಯಾಸ್ ಕಾಶ್ಮೆರಿ, ಅಲ್ ಜವಹಿರಿ, ಮುಲ್ಲಾ ಓಮರ್, ಸಿರಾಜ್ ಹಕ್ಕಾನಿ ಮತ್ತು ಅಬ್ದುಲ್ ರೆಹಮಾನ್ ಹೆಸರಿದೆ ಎಂದು ವರದಿಯಾಗಿದೆ. ಈಗಾಗಲೇ ಇಲ್ಯಾಸ್ ಕಾಶ್ಮೆರಿಯ ಹತ್ಯೆಯಾಗಿದೆ.ಅಮೆರಿಕ ತನಗೆ ಬೇಕಾದ ಐವರು ಉಗ್ರರ ಪಟ್ಟಿ ನೀಡಿರುವ ಮತ್ತು ಪಾಕಿಸ್ತಾನ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿರುವುದನ್ನು ಪರೋಕ್ಷವಾಗಿ ಒಪ್ಪಿಕೊಂಡಿರುವ ಅಲ್ಲಿನ ಪ್ರಧಾನಿ ಯೂಸುಫ್ ರಜಾ ಗಿಲಾನಿ ಅವರು ಪಾಕಿಸ್ತಾನ ಬೇರೆ ದೇಶಗಳ ವಿರುದ್ಧ ಕಾರ್ಯಾಚರಣೆ ನಡೆಸುವ ಉಗ್ರರ ತಾಣವಾಗಬಾರದೆಂದು ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, `ಪಾಕ್‌ನಲ್ಲಿನ ಉಗ್ರರು ಮತ್ತು ಅಲ್‌ಖೈದಾದೊಂದಿಗೆ ನಿಕಟ ಸಂಪರ್ಕವಿರುವ ಬಗ್ಗೆ ಅಮೆರಿಕ ಸದಾ ಕಳವಳ ವ್ಯಕ್ತಪಡಿಸುತ್ತಿದೆ. ಭಯೋತ್ಪಾದನೆಗಾಗಿ ನಮ್ಮ ನೆಲವನ್ನು ಬಳಸಿಕೊಳ್ಳುವಂತಾಗಬಾರದೆಂದು ಆತಂಕ ನಮಗೂ ಇದೆ. ಅಮೆರಿಕ ಯಾವುದೇ ಪಟ್ಟಿಯ ಬಗ್ಗೆ ಮಾತನಾಡಿದರೆ, ಅಲ್‌ಖೈದಾಗೆ ಮಾತ್ರ ಸಂಬಂಧಿಸಿದಮಾಹಿತಿಗಳನ್ನೂ ಐಎಸ್‌ಐ ಹಂಚಿಕೊಳ್ಳಲಿದೆ~ ಎಂದು ಹೇಳಿದರು.

ಅಮೆರಿಕ ಸಲ್ಲಿಸಿರುವ ಉಗ್ರರ ಪಟ್ಟಿಯಲ್ಲಿ ಇಲ್ಯಾಸ್ ಕಾಶ್ಮೆರಿ, ಅಲ್ ಜವಹಿರಿ, ಮುಲ್ಲಾ ಓಮರ್, ಸಿರಾಜ್ ಹಕ್ಕಾನಿ ಮತ್ತು ಅಬ್ದುಲ್ ರೆಹಮಾನ್ ಹೆಸರಿದೆ ಎಂದು ವರದಿಯಾಗಿದೆ. ಈಗಾಗಲೇ ಇಲ್ಯಾಸ್ ಕಾಶ್ಮೆರಿಯ ಹತ್ಯೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.