ಇಸ್ಲಾಮಾಬಾದ್ (ಪಿಟಿಐ): ಜೈಲಿನಲ್ಲಿದ್ದ 311 ಜನ ಭಾರತೀಯ ಮೀನುಗಾರರನ್ನು ಪಾಕಿಸ್ತಾನ ಬುಧವಾರ ಬಿಡುಗಡೆ ಮಾಡಿದೆ.`ಶಿಕ್ಷೆ ಪೂರ್ಣಗೊಳಿಸಿದ 311 ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಲಾಗಿದೆ~ ಎಂದು ಕರಾಚಿ ಜಿಲ್ಲೆಯ ಮಲೀರ್ ಜೈಲು ಅಧಿಕಾರಿಗಳು ತಿಳಿಸಿದ್ದಾರೆ.
ಬಿಡುಗಡೆ ಹೊಂದಿದ ಕೈದಿಗಳನ್ನು ವಾಘಾ ಗಡಿಗೆ ಕೊಂಡೊಯ್ದು ಅಲ್ಲಿ ಅವರನ್ನು ಭಾರತೀಯ ಅಧಿಕಾರಿಗಳಿಗೆ ಒಪ್ಪಿಸಲಾಗುತ್ತದೆ ಎಂದು ಜಿಯೊ ಟಿವಿ ವರದಿ ಮಾಡಿದೆ.ಈ ಕೈದಿಗಳಲ್ಲಿ 21 ಮಂದಿ ಮಕ್ಕಳು ಸೇರಿದ್ದು, ಅವರನ್ನು ಕರಾಚಿ ಬಾಲ ಮಂದಿರದಲ್ಲಿ ಇರಿಸಲಾಗಿತ್ತು. ವಯಸ್ಕರನ್ನು ಮಲೀರ್ ಜೈಲಿನಲ್ಲಿ ಇರಿಸಲಾಗಿತ್ತು. ಈ ಜೈಲಿನಲ್ಲಿ ಇನ್ನೂ 127 ಜನ ಭಾರತೀಯರು ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.