ADVERTISEMENT

ಪಾಕ್‌ಗೆ ಆರ್ಥಿಕ ನೆರವು ನಿಲ್ಲಿಸಿ: ಇಮ್ರಾನ್

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2011, 19:30 IST
Last Updated 26 ಸೆಪ್ಟೆಂಬರ್ 2011, 19:30 IST

ಲಂಡನ್ (ಪಿಟಿಐ): ಪಾಕಿಸ್ತಾನಕ್ಕೆ ಕೋಟ್ಯಂತರ ರೂಪಾಯಿಯ ಆರ್ಥಿಕ ನೆರವನ್ನು ಬ್ರಿಟನ್ ನಿಲ್ಲಿಸಬೇಕು ಎಂದು ಮಾಜಿ ಕ್ರಿಕೆಟಿಗ, ರಾಜಕೀಯ ಮುಖಂಡ ಇಮ್ರಾನ್ ಖಾನ್ ಒತ್ತಾಯಿಸಿದ್ದಾರೆ.

ಬ್ರಿಟನ್ ನೀಡುವ ಹಣದಿಂದ ಭ್ರಷ್ಟಾಚಾರ ಮತ್ತಷ್ಟು ಹೆಚ್ಚಾಗಲು ಕಾರಣವಾಗುತ್ತದೆ ಹೊರತು ಇದರಿಂದ ಜನಸಾಮಾನ್ಯರಿಗೆ ಎಳ್ಳಷ್ಟು ಉಪಯೋಗವಾಗುತ್ತಿಲ್ಲ ಎಂದು ಅವರು ಸೋಮವಾರ ಬಿಬಿಸಿಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

ಇದೇ ವೇಳೆ ಪಾಕಿಸ್ತಾನಕ್ಕೆ ವಾರ್ಷಿಕ ನೀಡಲಾಗುವ ಸಹಾಯದ ಮೊತ್ತವನ್ನು 140 ದಶಲಕ್ಷ ಪೌಂಡ್‌ಗಳಿಂದ 350 ದಶಲಕ್ಷ ಪೌಂಡ್‌ಗಳಿಗೆ  ಹೆಚ್ಚಿಸಲು ಬ್ರಿಟನ್ ಯೋಚಿಸಿರುವ ಹಿನ್ನೆಲೆಯಲ್ಲಿ ಇಮ್ರಾನ್ ಖಾನ್ ನೀಡಿರುವ ಹೇಳಿಕೆ ಮಹತ್ವ ಪಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.