ವಾಷಿಂಗ್ಟನ್ (ಪಿಟಿಐ): 2008ರಲ್ಲಿ ಮುಂಬೈ ಮೇಲೆ ನಡೆದ ದಾಳಿಗೆ ಪಾಕಿಸ್ತಾನ ಮೂಲದ ನಿಷೇಧಿತ ಲಷ್ಕರ್ ಎ ತೊಯ್ಬಾ (ಎಲ್ಇಟಿ) ಉಗ್ರಗಾಮಿ ಸಂಘಟನೆಯೇ ನೇರ ಹೊಣೆಯಾಗಿದ್ದು, ಕಾಶ್ಮೀರದಲ್ಲಿ ನಿರಂತರ ಅಶಾಂತಿ ಹರಡುತ್ತಿದೆ ಎಂದು ಅಮೆರಿಕ ಪ್ರತಿಪಾದಿಸಿದೆ.
ಈ ಸಂಘಟನೆ ನೆರೆ ಹೊರೆಯ ದೇಶಗಳ ಪ್ರಾದೇಶಿಕ ಬಾಂಧವ್ಯಗಳನ್ನು ಅತ್ಯಂತ ದುರ್ಭರಗೊಳಿಸಿದೆ ಎಂದು ಅಮೆರಿಕ ವಿದೇಶಾಂಗ ಇಲಾಖೆ ತಿಳಿಸಿದೆ. ಎಲ್ಇಟಿ ಜೊತೆಗೆ ಜೈಎಎಂ ಮತ್ತು ಎಚ್ಯುಎಂ ಕೂಡಾ ಕೈಜೋಡಿಸಿವೆ ಎಂದು ಅದು ಸ್ಪಷ್ಟಪಡಿಸಿದೆ. ಭಯೋತ್ಪಾದನೆ ಕುರಿತಂತೆ ತನ್ನ ವಾರ್ಷಿಕ ವರದಿಯಲ್ಲಿ ಈ ವಿಷಯವನ್ನು ಬಹಿರಂಗಪಡಿಸಿರುವ ಇಲಾಖೆಯು, `ಉಗ್ರರಿಗೆ ಪಾಕ್ ಸ್ವರ್ಗ ಸದೃಶವಾಗಿದೆ~ ಎಂದು ಪುನರುಚ್ಚರಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.