ADVERTISEMENT

ಪಾಕ್‌ ಸೆನೆಟ್‌ಗೆ ಕೃಷ್ಣಕುಮಾರಿ ಆಯ್ಕೆ

ಪಿಟಿಐ
Published 4 ಮಾರ್ಚ್ 2018, 20:04 IST
Last Updated 4 ಮಾರ್ಚ್ 2018, 20:04 IST
ಕೃಷ್ಣಕುಮಾರಿ ಕೊಲ್ಹಿ
ಕೃಷ್ಣಕುಮಾರಿ ಕೊಲ್ಹಿ   

ಕರಾಚಿ: ಸಿಂಧ್ ಪ್ರಾಂತ್ಯದ ಕೃಷ್ಣಕುಮಾರಿ ಕೊಲ್ಹಿ ಅವರು ಪಾಕಿಸ್ತಾನ ಸೆನೆಟ್‌ಗೆ ಆಯ್ಕೆಯಾಗುವ ಮೂಲಕ ಆ ಸ್ಥಾನಕ್ಕೇರಿದ ಹಿಂದೂ ಸಮುದಾಯದ ಮೊದಲ ದಲಿತ ಮಹಿಳೆಯಾಗಿದ್ದಾರೆ.

ಥಾರ್‌ ಪ್ರದೇಶದ ನಗರ್‌ಪಾರಕರ್‌ ಜಿಲ್ಲೆಯ ಗ್ರಾಮವೊಂದರ 39 ವರ್ಷದ ಕೊಲ್ಹಿ, ಬಿಲಾವಲ್ ಭುಟ್ಟೊ ಜರ್ದಾರಿ ನೇತೃತ್ವದ ಪಾಕಿಸ್ತಾನ ಪೀಪಲ್ಸ್ ಪಕ್ಷದ (ಪಿಪಿಪಿ) ಸದಸ್ಯೆಯಾಗಿದ್ದು, ಪಕ್ಷವು ಅವರಿಗೆ ಸೆನೆಟ್‌ ಟಿಕೆಟ್‌ ನೀಡಿತ್ತು. ಸಿಂಧ್‌ ಪ್ರಾಂತ್ಯದ ಅಲ್ಪಸಂಖ್ಯಾತ ಕೋಟಾದಡಿ ಆಯ್ಕೆಯಾಗಿದ್ದಾರೆ.

ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ನೀಡುವುದು ಮತ್ತು ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಯನ್ನು ಈ ಆಯ್ಕೆ ಬಿಂಬಿಸುತ್ತದೆ ಎಂದು ವಿಶ್ಲೇಷಿಸಲಾಗಿದೆ. ಇದಕ್ಕೂ ಮೊದಲು ಪಿಪಿಪಿ, ಹಿಂದೂ ಸಮುದಾಯದ ರತ್ನಾ ಭಗವಾನದಾಸ್‌ ಚಾವ್ಲಾರನ್ನು 2006ರಿಂದ 20012ರವರೆಗಿನ ಅವಧಿಗೆ ಸೆನೆಟರ್‌ ಆಗಿ ಆಯ್ಕೆ ಮಾಡಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.