ADVERTISEMENT

ಫಿಲಿಪ್ಪೀನ್ಸ್: ರಕ್ಷಣಾ ಕಾರ್ಯಕ್ಕೆ ಅಡ್ಡಿ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2012, 19:30 IST
Last Updated 7 ಫೆಬ್ರುವರಿ 2012, 19:30 IST

ಮನಿಲಾ (ಪಿಟಿಐ): ಫಿಲಿಪ್ಪೀನ್ಸ್‌ನಲ್ಲಿ ಭೂಕಂಪದ ಅವಶೇಷಗಳಡಿ ಸಿಲುಕಿಕೊಂಡಿರುವವರ ಪ್ರಾಣ ರಕ್ಷಣೆಗಾಗಿ ಹೋರಾಡುತ್ತಿರುವ ರಕ್ಷಣಾ ಕಾರ್ಯಕರ್ತರಿಗೆ ಮತ್ತೆ ಮತ್ತೆ ಸಂಭವಿಸುತ್ತಿರುವ ಭೂಕಂಪನಗಳು ಅಡ್ಡಿ ಉಂಟು ಮಾಡುತ್ತಿವೆ.

ಫಿಲಿಪ್ಪೀನ್ಸ್‌ನ ಮಧ್ಯಭಾಗದಲ್ಲಿ ಸೋಮವಾರ ಸಂಭವಿಸಿದ 6.8ರಷ್ಟು ತೀವ್ರತೆಯ ಭೂಕಂಪದಿಂದ 40 ಜನ ಸಾವಿಗೀಡಾಗಿದ್ದರು. ಅಲ್ಲದೆ ಹಲವರು ಕಾಣೆಯಾಗಿದ್ದಾರೆ. ಆ ಬಳಿಕ ಮಂಗಳವಾರ ಮಧ್ಯಾಹ್ನದ ಹೊತ್ತಿಗೆ 1005 ಬಾರಿ ಭೂಮಿ ಕಂಪಿಸಿದೆ.

ಭೂಕಂಪನದಿಂದ ಭೂಕುಸಿತ ಸಂಭವಿಸಿದ್ದು, ಫಿಲಿಪ್ಪೀನ್ಸ್‌ನ 3ನೇ ಬೃಹತ್ ದ್ವೀಪವಾದ ನೆಗ್ರೋಸ್‌ನ ಹಲವಾರು ಗುಡ್ಡಗಾಡು ಪ್ರದೇಶಗಳ ರಸ್ತೆಗಳು ಮುಚ್ಚಿಹೋಗಿವೆ.
ಅಧ್ಯಕ್ಷ ನಿನೋಯ್ ಅಖ್ವಿನೊ, ಶಾಂತಿ ಕಾಯ್ದುಕೊಳ್ಳುವಂತೆ ಜನರಲ್ಲಿ ಮನವಿ ಮಾಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.