ವಾಷಿಂಗ್ಟನ್ (ಪಿಟಿಐ): ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಪೈಕಿ ಮೂರನೇ ಎರಡರಷ್ಟು ರಾಷ್ಟ್ರಗಳು ಬಡತನ ಮತ್ತು ಹಸಿವೆಯನ್ನು ನೀಗಿಸುವ ನಿಟ್ಟಿನಲ್ಲಿ ಪ್ರಮುಖ ಗುರಿಯತ್ತ ಸಾಗಿವೆ, ಭಾರತ, ಚೀನಾಗಳಂತೂ ಈ ವಿಚಾರದಲ್ಲಿ ಗಮನಾರ್ಹ ಸಾಧನೆ ಮಾಡಿವೆ ಎಂದು ವಿಶ್ವ ಬ್ಯಾಂಕ್ ಮತ್ತು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಸಂಸ್ಥೆಗಳು ತಿಳಿಸಿವೆ.
ಈ ದೇಶಗಳಲ್ಲಿ ಜಾರಿಗೆ ತರಲಾಗಿರುವ ಸುಧಾರಿತ ನೀತಿಗಳು ಮತ್ತು ವೇಗದ ಪ್ರಗತಿಯಿಂದಾಗಿ 2015ರೊಳಗೆ ಅಥವಾ ಅದಕ್ಕಿಂತ ಸ್ವಲ್ಪ ಅನಂತರ ಬಡತನ ನಿರ್ಮೂಲನೆ ಗುರಿ ಈಡೇರುವುದು ಸಾಧ್ಯವಿದೆ ಎಂದು 2011ನೇ ಸಾಲಿನ ಜಾಗತಿಕ ನಿಗಾ ವರದಿಯಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.