ADVERTISEMENT

ಬಾಂಗ್ಲಾದೇಶ: ಹಿಂದೂ ಸಿ.ಜೆ ಸರ್ಕಾರದ ನಡುವೆ ಸಂಘರ್ಷ

ಪಿಟಿಐ
Published 14 ಅಕ್ಟೋಬರ್ 2017, 19:30 IST
Last Updated 14 ಅಕ್ಟೋಬರ್ 2017, 19:30 IST
ಸುರೇಂದ್ರ ಕುಮಾರ್ ಹಾಗೂ ಶೇಖ್  ಹಸೀನಾ
ಸುರೇಂದ್ರ ಕುಮಾರ್ ಹಾಗೂ ಶೇಖ್ ಹಸೀನಾ   

ಢಾಕಾ: ಬಾಂಗ್ಲಾದೇಶ ಸರ್ಕಾರದ ಜೊತೆಗಿನ ಸಂಘರ್ಷದಿಂದಾಗಿ ಅಲ್ಲಿನ ಸುಪ್ರೀಂಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಸುರೇಂದ್ರಕುಮಾರ್ ಸಿನ್ಹಾ ಅವರು ಒತ್ತಾಯಪೂರ್ವಕವಾಗಿ ರಜೆ ಮೇಲೆ ತೆರಳಿದ್ದಾರೆ. ಇವರು ಬಾಂಗ್ಲಾದೇಶ ಸುಪ್ರೀಂಕೋರ್ಟ್‌ನ ಮೊದಲ ಹಿಂದೂ ನ್ಯಾಯಮೂರ್ತಿಯಾಗಿದ್ದಾರೆ.

ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳ ವಾಗ್ದಂಡನೆ ವಿಚಾರದಲ್ಲಿ ಸಂಸತ್ತಿನ ಅಧಿಕಾರ ತೆಗೆದುಹಾಕುವ ನಿರ್ಧಾರ ಪ್ರಕಟಿಸಿದ ಬಳಿಕ ಸರ್ಕಾರವು ಇವರ ಮೇಲೆ ಅಸಮಾಧಾನ ಹೊಂದಿದೆ.

ಜುಲೈನಲ್ಲಿ ತಾವು ಹೊರಡಿಸಿದ ಆದೇಶದಿಂದ ವಿವಾದ ಉಂಟಾಗಿರುವುದು ಮುಜುಗರ ತಂದಿದೆ ಎಂದಿರುವ ಅವರು ಶುಕ್ರವಾರ ರಾತ್ರಿ ಆಸ್ಟ್ರೇಲಿಯಾಗೆ ತೆರಳಿದ್ದಾರೆ. ಅನಾರೋಗ್ಯದ ಕಾರಣ ತೆರಳಿದ್ದಾರೆ ಎಂದು ಸರ್ಕಾರ ಬಿಂಬಿಸುತ್ತಿರುವುದನ್ನು ಅವರು ಟೀಕಿಸಿದ್ದಾರೆ.

ADVERTISEMENT

‘ನಾನು ನ್ಯಾಯಾಂಗ ವ್ಯವಸ್ಥೆಯ ರಕ್ಷಕ. ನ್ಯಾಯಾಂಗದ ರಕ್ಷಣೆ ಸಲುವಾಗಿ ತಾತ್ಕಾಲಿಕವಾಗಿ ತೆರಳುತ್ತಿದ್ದೇನೆ. ಮತ್ತೆ ಹಿಂದಿರುಗಿ ಬರುತ್ತೇನೆ’ ಎಂದು ಅವರು ವಿಮಾನ ನಿಲ್ದಾಣದಲ್ಲಿಹೇಳಿಕೆ ನೀಡಿದ್ದಾರೆ.

ತಮ್ಮ ತೀರ್ಪಿನ ಬಗ್ಗೆ ಸರ್ಕಾರ ಹಾಗೂ ಪ್ರಧಾನಿ ಶೇಖ್ ಹಸೀನಾ ಅವರಿಗೆ ತಪ್ಪಾಗಿ ಮನವರಿಕೆ ಮಾಡಿಕೊಡಲಾಗಿದೆ. ಸತ್ಯವನ್ನು ಅವರು ಸದ್ಯದಲ್ಲೇ ಅರ್ಥಮಾಡಿಕೊಳ್ಳಿದ್ದಾರೆ ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದ್ದಾರೆ.

‘ದೇಶದ ಅಧ್ಯಕ್ಷರು ಹಾಗೂ ಸಂಸತ್ತಿನ ಅಧಿಕಾರವನ್ನು ಮೊಟಕುಗೊಳಿಸುವ ಯತ್ನವಿದು’ ಎಂದು ಬಾಂಗ್ಲಾದೇಶದ ಪ್ರಧಾನಿ ಹಸೀನಾ ಅವರು ಆರೋಪಿಸಿದ್ದಾರೆ.

ಪಾಕಿಸ್ತಾನ ಪ್ರಧಾನಿಯ ಉದಾಹರಣೆ ನೀಡಿ ದೇಶಕ್ಕೆ ಮುಜುಗರ ತಂದಿರುವ ನ್ಯಾಯಮೂರ್ತಿಗಳು ರಾಜೀನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.