ADVERTISEMENT

ಬಾಗ್ದಾದ್‌ನಲ್ಲಿ ಆತ್ಮಾಹುತಿ ಬಾಂಬ್‌ ದಾಳಿ: 27 ಸಾವು

ಏಜೆನ್ಸೀಸ್
Published 30 ಮೇ 2017, 19:30 IST
Last Updated 30 ಮೇ 2017, 19:30 IST
ಬಾಗ್ದಾದ್‌ನಲ್ಲಿ ಆತ್ಮಾಹುತಿ ಬಾಂಬ್‌ ದಾಳಿ: 27 ಸಾವು
ಬಾಗ್ದಾದ್‌ನಲ್ಲಿ ಆತ್ಮಾಹುತಿ ಬಾಂಬ್‌ ದಾಳಿ: 27 ಸಾವು   

ಬಾಗ್ದಾದ್‌: ಇಲ್ಲಿ ನಡೆದ ಎರಡು ಪ್ರತ್ಯೇಕ ಆತ್ಮಾಹುತಿ ಬಾಂಬ್‌ ದಾಳಿಗಳಲ್ಲಿ 27 ಮಂದಿ ಮೃತಪಟ್ಟಿದ್ದು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಸೋಮವಾರ ಮಧ್ಯರಾತ್ರಿ ಐಸ್‌ಕ್ರೀಂ ಅಂಗಡಿ ಬಳಿ ಸಂಭವಿಸಿದ ಮೊದಲ  ಆತ್ಮಾಹುತಿ ದಾಳಿಯಲ್ಲಿ 16 ಮಂದಿ ಸಾವಿಗೀಡಾಗಿದ್ದಾರೆ. ಮಂಗಳವಾರ ಬೆಳಿಗ್ಗೆ ಬಾಗ್ದಾದ್‌ನ ಪ್ರಮುಖ ಸೇತುವೆ ಬಳಿ ಕಾರಿನಲ್ಲಿ ಬಾಂಬ್‌ ಸ್ಫೋಟಗೊಂಡಿದ್ದು ಇದರಲ್ಲಿ 11 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಐಎಸ್‌ ಹೊಣೆ: ಐಎಸ್‌ ಉಗ್ರರು ಮೊದಲನೆ ದಾಳಿಯ ಹೊಣೆ ಹೊತ್ತುಕೊಂಡಿದೆ.

ADVERTISEMENT

ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿಕೊಂಡು  ಸ್ಫೋಟಕಗಳಿದ್ದ ವಾಹನ ಬಳಸಿ ದಾಳಿ ನಡೆಸಲಾಗಿದೆ ಎಂದು ಐಎಸ್‌ ಹೇಳಿಕೊಂಡಿದೆ.

ಎರಡನೇ ದಾಳಿಯ ಹೊಣೆಯನ್ನು  ಐ.ಎಸ್‌ ಹೊತ್ತುಕೊಂಡಿಲ್ಲ. ಮುಸ್ಲಿಮರ ಪವಿತ್ರ ಮಾಸ ರಮ್ಜಾನ್‌ ಆರಂಭವಾದ ಕೆಲವೇ ದಿನಗಳಲ್ಲಿ ಈ ದಾಳಿ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.