ADVERTISEMENT

ಬಿಲ್ ಕ್ಲಿಂಟನ್ ರಾಸಲೀಲೆ: ಕಾಲ ಗತಿಸಿದರೂ ಕಡಿಮೆಯಾಗದ ಕಾವು!

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2012, 9:55 IST
Last Updated 12 ಫೆಬ್ರುವರಿ 2012, 9:55 IST

ವಾಷಿಂಗ್ಟನ್ (ಪಿಟಿಐ): ಅಮೆರಿಕ ಅಧ್ಯಕ್ಷ ಗಾದಿಗಾಗಿ ನಡೆದ ಚುನಾವಣೆಯಲ್ಲಿ ಮೋನಿಕಾ ಲೆವಿನ್ಸ್ಕಿ ಜತೆ ಇತ್ತು ಎನ್ನಲಾದ ಸಂಬಂಧವೇ ಬಿಲ್ ಕ್ಲಿಂಟನ್ ಗೆ ಮುಳುವಾಯಿತು. 1998ರ ಚುನಾವಣೆಯಲ್ಲಿ ಅವರು ಸೋಲುಂಡರು. ಆದರೆ ಹದಿನಾಲ್ಕು ವರ್ಷಗಳ ನಂತರವೂ ಈ ಇಬ್ಬರ ನಡುವಿನ ಸಂಬಂಧದ ವಿಷಯ ಕುರಿತು ಕ್ಲಿಂಟನ್ ನಿಕಟವರ್ತಿಗಳು ಆಡಿದ ಮಾತುಗಳು ಈಗ ಮತ್ತೊಮ್ಮೆ ಅದೇ ಕಾವು ಪಡೆದಿದೆ.

ಅಮೆರಿಕ ಅಧ್ಯಕ್ಷರನ್ನು ಕುರಿತ ಹೊಸ ಸಾಕ್ಷ್ಯಚಿತ್ರ ಫೆ. 20ರಂದು ಬ್ರಿಟನ್ ಹಾಗೂ ಅಮೆರಿಕದಲ್ಲಿ ಪ್ರಸಾರವಾಗಲಿದೆ. ಇದರಲ್ಲಿ ಶ್ವೇತ ಭವನದ ಆಂತರಿಕ ಅಧಿಕಾರಿ ಮೋನಿಕಾ ಲೆವಿನ್ಸ್ಕಿ ಜತೆಗೆ ಅಧ್ಯಕ್ಷರ ಸಂಬಂಧ ಕುರಿತು ಅವರ ಮಾಜಿ ಸಹೋದ್ಯೋಗಿಗಳೇ ಕೆಲ ಸ್ವಾರಸ್ಯಕರ ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಎರಡು ಕಂತುಗಳಲ್ಲಿ ಪ್ರಸಾರವಾಗುವ ಈ ಸಾಕ್ಷ್ಯಚಿತ್ರದಲ್ಲಿ ಮೋನಿಕಾ ಜತೆಗಿನ ಸಂಬಂಧದ ಸಾಕ್ಷ್ಯಗಳು ಬಹಿರಂಗಗೊಳ್ಳುವ ಕೆಲ ನಿಮಿಷಗಳ ಮುನ್ನ ಕ್ಲಿಂಟನ್ ಅತಿ ನಂಬುಗೆಯ ಸಲಹೆಗಾರ ಡಿಕ್ ಮಾರಿಸ್ ಅವರಿಗೆ ಕರೆ ಮಾಡಿದ ಕ್ಷಣವನ್ನು ಹಂಚಿಕೊಂಡಿದ್ದಾರೆ.

ADVERTISEMENT

~ಎಂದು ನಾನು ಶ್ವೇತ ಭವನಕ್ಕೆ ಕಾಲಿಟ್ಟೆನೋ ಅಂದೇ ನನ್ನ ದೇಹ ಬಯಕೆಗಳಿಗೆ ಪೂರ್ಣ ವಿರಾಮ ಹಾಕಬೇಕಿತ್ತು ಎಂದು ಬಿಲ್ ನನ್ನ ಬಳಿ ಹೇಳಿದ್ದರು. 23 ವರ್ಷದ ಮೋನಿಕಾ ತಮ್ಮ ಮೇಲೆ ಹಾಕಿರುವ ಮೊಕದ್ದಮೆಯಲ್ಲಿ ನಾನು ಬಹಳ ದುರ್ಬಲನಾಗಿದ್ದೇನೆ. ಆಕೆಯೊಂದಿಗಿನ ನನ್ನ ಅತಿಯಾದ ವರ್ತನೆಯೇ ಈ ತೊಂದರೆಗೆ ಸಿಲುಕುವಂತೆ ಮಾಡಿದೆ~ ಎಂದು ಮಾರಿಸ್ ಹೇಳಿದ್ದಾರೆ.

ಶ್ವೇತ ಭವನದ ಕಾನೂನು ತಜ್ಞ ಕೆನ್ ಗಾರ್ಮ್ಲಿ ಅವರ ಪ್ರಕಾರ ಕ್ಲಿಂಟನ್ ಹಾಗೂ ಮೋನಿಕಾ ಭೇಟಿಯಾದ ಮೊದಲ ಕ್ಷಣವೇ ಅವರಿಬ್ಬರಲ್ಲೂ ~ವಿದ್ಯುತ್~ ಪ್ರವಹಿಸಿದ್ದಂತೂ ನಿಜ ಎಂದ ಅವರು ಈ ಇಬ್ಬರ ನಡುವಿನ ಕಾಮದ ಬಯಕೆಯ ಕೆಲ ಸ್ವಾರಸ್ಯಕರ ಘಟನೆಗಳನ್ನು ಹಂಚಿಕೊಂಡಿದ್ದಾರೆ.

ಇಷ್ಟೇ ಅಲ್ಲದೆ, ಕ್ಲಿಂಟನ್ ಸ್ವಂತ ಕ್ಷೇತ್ರವಾದ ಅರ್ಕನಾಸಸ್ನಲ್ಲಿ ಅವರೊಂದಿಗೆ ರಾಜಕೀಯ ಕ್ಷೇತ್ರದಲ್ಲಿ ಕೆಲಸ ಮಾಡಿದ ಕೆಲ ಧುರೀಣರ ಪ್ರಕಾರ ಕ್ಲಿಂಟನ್ ತಮ್ಮ ರಾಜಕೀಯ ಕ್ಷೇತ್ರದ ಉದ್ದಕ್ಕೂ ಸ್ತ್ರೀಲೋಲರಾಗಿದ್ದ ಅಂಶವನ್ನು ಹೊರ ಹಾಕಿದ್ದಾರೆ.

ಒಂದೇ ದಿನ 25 ಸ್ತ್ರೀಯರೊಂದಿಗೆ ಕಳೆದ ವ್ಯಕ್ತಿಯೊಂದಿಗೆ ಕೆಲಸ ಮಾಡಿದ ಕ್ಷಣಗಳನ್ನು ನೆನಪಿಸಿಕೊಂಡ ಬೆಟ್ಸಿ ರೈಟ್ ಎಂಬಾಕೆ, ಕ್ಲಿಂಟನ್ ಗೌರ್ನರ್ ಆಗುವ ಮುನ್ನ ಆತನ ಕಚೇರಿಗೆ ಬಂದು ಆತನ ಗೆಳತಿಯರ ಪಟ್ಟಿಯನ್ನು ಓದಿ ಹೇಳಿದ ಅನುಭವವನ್ನು ಹಂಚಿಕೊಂಡಿದ್ದಾರೆ.

ಅರ್ಕನಾಸಸ್ ಪ್ರದೇಶದಲ್ಲಿ ಕ್ಲಿಂಟನ್ ಜತೆ ಸಂಬಂಧ ಹೊಂದಿದ್ದ ಮರ್ಲಾ ಕ್ರೈಡೆರ್ ಅವರ ಪ್ರಕಾರ ಆತ ಅಕ್ಷರಶಃ ಸಮ್ಮೋಹನಗೊಳಿಸುತ್ತಿದ್ದರು. ಜೇನಿಗೆ ನೊಣಗಳು ಮುತ್ತಿದಂತೆನಿಸುತ್ತಿತ್ತು~ ಎಂದು ಕ್ಲಿಂಟನ್ ಅವರ ವ್ಯಕ್ತಿತ್ವವನ್ನು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.