ADVERTISEMENT

ಬೃಹತ್ ವೇಶ್ಯಾಗೃಹ ಪ್ರಸ್ತಾವ ತಿರಸ್ಕೃತ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2011, 19:30 IST
Last Updated 20 ಸೆಪ್ಟೆಂಬರ್ 2011, 19:30 IST

ಮೆಲ್ಬರ್ನ್ (ಪಿಟಿಐ): ಆಸ್ಟ್ರೇಲಿಯಾ ರಾಜಧಾನಿ ಸಿಡ್ನಿಯಲ್ಲಿ ದೇಶದ ಅತೀ ದೊಡ್ಡ ವೇಶ್ಯಾಗೃಹ ನಿರ್ಮಾಣ ಮಾಡುವ ಪ್ರಸ್ತಾವನೆಯನ್ನು ಅಲ್ಲಿನ ನಗರಾಡಳಿತ ತಿರಸ್ಕರಿಸಿದೆ.

ಸಿಡ್ನಿಯ ಪಶ್ಚಿಮ ಭಾಗದಲ್ಲಿರುವ ಕ್ಯಾಂಪರ್‌ಡೌನ್‌ನಲ್ಲಿ ವೇಶ್ಯಾಗೃಹ ನಿರ್ಮಾಣಕ್ಕೆ ಅವಕಾಶವನ್ನು ಕೋರಿ ನಗರ ಆಡಳಿತಕ್ಕೆ ಮನವಿ ಸಲ್ಲಿಸಲಾಗಿತ್ತು. ಆದರೆ, ಸೋಮವಾರ ನಡೆದ ನಗರಾಡಳಿತದ ಸಭೆಯಲ್ಲಿ ಆ ಪ್ರಸ್ತಾವನೆಯನ್ನು ತಿರಸ್ಕರಿಸ ಲಾಯಿತು. 1.20 ಕೋಟಿ ಡಾಲರ್ ವೆಚ್ಚದಲ್ಲಿ ಇದನ್ನು ನಿರ್ಮಿಸಲು ಉದ್ದೇಶಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.