ವಾಷಿಂಗ್ಟನ್ (ಪಿಟಿಐ): ಬ್ರಹ್ಮಾಂಡ ರಹಸ್ಯಕ್ಕೆ ಸಂಬಂಧಿಸಿದಂತೆ ಖಗೋಳಶಾಸ್ತ್ರಜ್ಞರು ಇದೇ ಮೊದಲ ಬಾರಿಗೆ ಪ್ರತ್ಯಕ್ಷ ಸಾಕ್ಷ್ಯವೊಂದನ್ನು ಪತ್ತೆ ಹಚ್ಚಿದ್ದಾರೆ. ಈ ಕುರಿತು ಸಂಶೋಧನೆಯಲ್ಲಿ ನಿರತರಾಗಿರುವ ವಿಜ್ಞಾನಿಗಳು, ಜಗತ್ತು ಅಸ್ತಿತ್ವಕ್ಕೆ ಬರುವುದಕ್ಕೆ ಮುಂಚೆ, ಅಂದರೆ, 1400 ಕೋಟಿ ವರ್ಷಗಳ ಹಿಂದೆ ಉತ್ಪತ್ತಿಯಾದ ಗುರುತ್ವಾಕರ್ಷಣ ಅಲೆಗಳ ಚಿತ್ರವೊಂದನ್ನು ಸೆರೆಹಿಡಿದಿದ್ದಾರೆ.
ಬ್ರಹ್ಮಾಂಡ ರಹಸ್ಯ ಸಂಶೋಧನಾ ತಂಡದ, ‘ಬ್ರಹ್ಮಾಂಡ ಹೊರಗ್ಯಾಲಕ್ಸಿ ಧ್ರುವೀಕರಣ ಹಿನ್ನೆಲೆ ಚಿತ್ರ’ (ಬಿಐಸಿಇಪಿ2) ವಿಭಾಗದ ಸಹಯೋಗದೊಂದಿಗೆ ಸಂಶೋಧಕರು ಈ ಸಾಕ್ಷ್ಯವನ್ನು ಕಲೆ ಹಾಕಿರುವುದಾಗಿ ಘೋಷಿಸಿದ್ದಾರೆ. ಜಗತ್ತು ಹುಟ್ಟಲು ‘ಮಹಾ ಸ್ಪೋಟ‘ (ಅಣು –ಪರಮಾಣುಗಳ ಸಂಫರ್ಷ) ಕಾರಣ ಎನ್ನುವುದು ಇಂದಿಗೂ ಸಿದ್ಧಾಂತವಾಗಿಯೇ ಉಳಿದಿತ್ತು. ಆದರೆ ಈಗ ಅದಕ್ಕೆಲ್ಲ ಪೂರಕವಾಗಿ ಈ ಮಾಹಿತಿ ದೊರೆತಿದೆ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.