ಲಂಡನ್ (ಪಿಟಿಐ): ಮೊದಲ ಬಾರಿಗೆ ಆರಂಭಿಸಿರುವ ದಾದಾಭಾಯಿ ನವರೋಜಿ ಪ್ರಶಸ್ತಿ ಪುರಸ್ಕೃತ ಮೂವರ ಪಟ್ಟಿಯನ್ನು ಬ್ರಿಟನ್ ಸರ್ಕಾರ ಪ್ರಕಟಿಸಿದೆ.
ಭಾರತದ ಉದ್ಯಮಿ ನವರೋಜಿ ಹೆಸರಿನಲ್ಲಿ ಬ್ರಿಟನ್ ಸರ್ಕಾರ ಪ್ರಶಸ್ತಿ ಆರಂಭಿಸಿದ್ದು, ಭಾರತ ಮತ್ತು ಇಂಗ್ಲೆಂಡ್ ನಡುವಿನ ಸಂಬಂಧವನ್ನು ಬಲಪಡಿಸಲು ಶ್ರಮಿಸಿದವರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
ವಾಣಿಜ್ಯ ವಿಭಾಗದಲ್ಲಿ ಭಾರತ – ಬ್ರಿಟನ್ ವಾಣಿಜ್ಯ ಕೌನ್ಸಿಲ್ನ ಅಧ್ಯಕ್ಷ ಪೆಟ್ರೀಷಿಯಾ ಹೆವಿಟ್, ಶಿಕ್ಷಣ ವಿಭಾಗದಲ್ಲಿ ಡೇಮ್ ಆಶಾ ಖೇಮ್ಕಾ ಹಾಗೂ ಸಂಸ್ಕೃತಿ ವಿಭಾಗದಲ್ಲಿ ನಟ ಮಾಧವ ಶರ್ಮಾ ಅವರು ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಹೊಸ ವರ್ಷದ ಅಂಗವಾಗಿ ಗೌರವಿಸಲು ಈ ವರ್ಷದ ಆರಂಭದಲ್ಲಿ ಸಿದ್ಧಪಡಿಸಿದ್ದ ಗೌರವಾನ್ವಿತರ ಪಟ್ಟಿಯಲ್ಲೂ ಖೆಮ್ಕಾ ಸ್ಥಾನ ಪಡೆದಿದ್ದರು. ಅವರಿಗೆ ಪ್ರಶಸ್ತಿ ದೊರೆತಿರುವುದು ಬ್ರಿಟನ್ನಲ್ಲಿ ಭಾರತೀಯರಿಗೆ ಸಿಕ್ಕ ಮನ್ನಣೆ ಎಂದು ಬಣ್ಣಿಸಲಾಗಿದೆ.
ಸಾರ್ವಜನಿಕರಿಂದ ಬರುವ ನಾಮನಿರ್ದೇಶನಆಧರಿಸಿ ಸಚಿವರ ತಂಡ ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡುತ್ತದೆ. ಸಾರ್ವಜನಿಕರಿಂದ ಒಟ್ಟು 80 ಅರ್ಜಿಗಳು ಬಂದಿದ್ದವು. ಪ್ರಾದೇಶಿಕ ಪ್ರವಾಸಿ ಭಾರತೀಯ ದಿನದ ಅಂಗವಾಗಿ ಶುಕ್ರವಾರ ಸಮಾರಂಭ ದಲ್ಲಿ ಭಾಗವಹಿಸಿದ್ದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಬ್ರಿಟನ್ ಉಪ ಪ್ರಧಾನಿ ನಿಕ್ ಕ್ಲೆಗ್ ಭವ್ಯ ಸ್ವಾಗತ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.