ADVERTISEMENT

ಬ್ರಿಟನ್ ಮಾಧ್ಯಮದ ವರದಿ:ಕಾಲ್ ಸೆಂಟರ್‌ಗಳಿಂದ ಮಾಹಿತಿ ಸೋರಿಕೆ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2012, 19:30 IST
Last Updated 18 ಮಾರ್ಚ್ 2012, 19:30 IST

ಲಂಡನ್ (ಪಿಟಿಐ):  ಭಾರತದ ಕಾಲ್ ಸೆಂಟರ್‌ಗಳಲ್ಲಿ ಕೆಲಸ ಮಾಡುತ್ತಿರುವ ಕೆಲವು ಭ್ರಷ್ಟ ಕೆಲಸಗಾರರು ಬ್ರಿಟನ್ ಗ್ರಾಹಕರ ಗೋಪ್ಯ ವೈಯಕ್ತಿಕ ಮಾಹಿತಿಗಳನ್ನು ಭಾರಿ ಪ್ರಮಾಣದಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಕ್ರೆಡಿಟ್ ಕಾರ್ಡ್ ವಿವರ, ವೈದ್ಯಕೀಯ ವಿವರ ಹಾಗೂ ಸಾಲದ ಅಂಕಿಅಂಶ ಸೇರಿದಂತೆ  ಬ್ರಿಟನ್ ಗ್ರಾಹಕರ ವೈಯಕ್ತಿಕ ವಿವರಗಳನ್ನು ಈ ಕೆಲಸಗಾರರು ಮಾರಾಟ ಮಾಡುತ್ತಿದ್ದಾರೆ ಎಂದು `ಸಂಡೇ ಟೈಮ್ಸ~ ವರದಿ ಮಾಡಿದೆ.

ತಾನು ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಈ ಅಂಶ ಬಹಿರಂಗಗೊಂಡಿದ್ದು, 5 ಲಕ್ಷಕ್ಕೂ ಹೆಚ್ಚು ಬ್ರಿಟನ್ ನಾಗರಿಕರ ವೈಯಕ್ತಿಕ ಮಾಹಿತಿ ಸೋರಿಕೆಯಾಗಿದೆ ಎಂದು ಪತ್ರಿಕೆ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.