ADVERTISEMENT

ಬ್ರಿಟಿಷ್‌ ನಟ ರಿಕ್‌ಮನ್‌ ನಿಧನ

​ಪ್ರಜಾವಾಣಿ ವಾರ್ತೆ
Published 14 ಜನವರಿ 2016, 19:30 IST
Last Updated 14 ಜನವರಿ 2016, 19:30 IST
ಬ್ರಿಟಿಷ್‌ ನಟ ರಿಕ್‌ಮನ್‌ ನಿಧನ
ಬ್ರಿಟಿಷ್‌ ನಟ ರಿಕ್‌ಮನ್‌ ನಿಧನ   

ಲಂಡನ್‌(ಪಿಟಿಐ): ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಖ್ಯಾತ ಬ್ರಿಟಿಷ್‌ ನಟ ಅಲನ್‌ ರಿಕ್‌ಮನ್‌(69) ಗುರುವಾರ ನಿಧನರಾಗಿದ್ದಾರೆ.

‘ಹ್ಯಾರಿ ಪಾಟರ್’ ಸರಣಿಯ ಚಿತ್ರಗಳಲ್ಲಿನ ಅಭಿನಯಕ್ಕೆ ಅವರಿಗೆ ಅಪಾರ  ಭಾರತೀಯ ಅಭಿಮಾನಿಗಳಿದ್ದಾರೆ.

ರಿಕ್‌ಮನ್‌ ನಿಧನವನ್ನು ಅವರ ಕುಟುಂಬದ ಮೂಲಗಳು ದೃಢಪಡಿಸಿವೆ.  ಅಲನ್‌ ತಮ್ಮ ಧ್ವನಿಯ ಮೂಲಕವೇ ಮೆಚ್ಚುಗೆ ಗಳಿಸಿದ್ದರು. ನಟನೆ ಅಲ್ಲದೆ ಅವರು ಹಲವು ಚಿತ್ರಗಳನ್ನೂ  ನಿರ್ದೇಶಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.