ADVERTISEMENT

ಬ್ರಿಟಿಷ್ ಶಾಲೆಯಲ್ಲಿ ಸ್ಕರ್ಟ್ ನಿಷೇಧ

​ಪ್ರಜಾವಾಣಿ ವಾರ್ತೆ
Published 17 ಜೂನ್ 2012, 19:30 IST
Last Updated 17 ಜೂನ್ 2012, 19:30 IST

ಲಂಡನ್ (ಪಿಟಿಐ):  ಇನ್ನು ಮುಂದೆ ಬ್ರಿಟನ್‌ನಲ್ಲಿ ಬಾಲಕಿಯರು ಶಾಲೆಗೆ ಸ್ಕರ್ಟ್‌ಗಳನ್ನು ತೊಟ್ಟು ಬರುವಂತಿಲ್ಲ...? ಆಶ್ಚರ್ಯವೇ, ಹೌದು..! ಬ್ರಿಟಿಷ್ ಶಾಲೆಯೊಂದು ಬಾಲಕಿಯರು ಧರಿಸುವ ಸ್ಕರ್ಟ್ (ಲಂಗ)ಗಳ ಮೇಲೆ ನಿಷೇಧ ಹೇರಿದೆ.

ಬ್ರಿಟನ್‌ನೆಲ್ಲಡೆ ಅಲ್ಲ, ಇಲ್ಲಿನ ಬ್ರಿಟಿಷ್ ಶಾಲೆಯಲ್ಲಿ ಮಾತ್ರ ಸ್ಕರ್ಟ್‌ಗಳನ್ನು ನಿಷೇಧಿಸಲಾಗಿದೆ. ಇದರಿಂದ ಪರ ಮತ್ತು ವಿರೋಧದ ಹೇಳಿಕೆಗಳು ವ್ಯಕ್ತವಾಗಿವೆ. `ಬಾರ್ ಮತ್ತು ರಾತ್ರಿ ಕ್ಲಬ್‌ಗಳಿಗೆ ತೆರಳುವವರು

ಸ್ಕರ್ಟ್‌ಗಳನ್ನು ತೊಡುವಂತೆ ಶಾಲೆಗೂ ಸ್ಕರ್ಟ್ ತೊಟ್ಟುಬರುವುದು ಅಸಹನೀಯ~ ಎಂದು ಶಿಕ್ಷಕಿಯೊಬ್ಬರು ತಿಳಿಸಿದ್ದಾರೆ. ತೊಡೆಗಳವರೆಗಿನ ಉಡುಪು ಧರಿಸುವುದು ಮಕ್ಕಳಲ್ಲಿ ಲೈಂಗಿಕ ಆಸಕ್ತಿಯನ್ನು ಕೆರಳಿಸುತ್ತದೆ ಇದರಿಂದ ವಿದ್ಯಾಭಾಸದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಬ್ರಿಟಿಷ್ ಶಾಲೆ ಹೇಳಿದೆ.
 
ಈ ನಿಷೇಧವನ್ನು ಕೆಲವರು ವಿರೋಧಿಸಿದ್ದು, ಮೊಣಕಾಲಿನವರೆಗೂ ಉದ್ದನೆಯ ಸ್ಕರ್ಟ್ ಧರಿಸಲು ಅವಕಾಶ ನೀಡಬೇಕಿತ್ತು ಎಂದು ಅವರು ಹೇಳಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.