ADVERTISEMENT

ಬ್ರೆಜಿಲ್‌ಗೆ ಸ್ನೊಡೆನ್‌ ಭರವಸೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2013, 19:30 IST
Last Updated 17 ಡಿಸೆಂಬರ್ 2013, 19:30 IST

ರಿಯೊ ಡಿಜನೈರೊ (ಎಪಿ): ತನಗೆ ರಾಜಕೀಯ ಆಶ್ರಯ ನೀಡಿದರೆ ಅಮೆರಿಕ ಗೂಢಚರ್ಯೆ ಸಂಸ್ಥೆಗಳು ನಡೆಸುವ ಬೇಹುಗಾರಿಕೆ ಚಟುವಟಿಕೆ ಗಳನ್ನು ಪತ್ತೆಹಚ್ಚಲು ಬ್ರೆಜಿಲ್‌ ಸರ್ಕಾರಕ್ಕೆ ನೆರವು ನೀಡುವುದಾಗಿ ಅಮೆರಿಕದ ಕೇಂದ್ರ ಗುಪ್ತಚರ ಸಂಸ್ಥೆಯ ಮಾಜಿ ಗುತ್ತಿಗೆದಾರ ಎಡ್ವರ್ಡ್‌ ಸ್ನೊಡೆನ್‌ ಬಹಿರಂಗ ಪತ್ರ ಬರೆದು ಭರವಸೆ ನೀಡಿದ್ದಾರೆ.

ಅಮೆರಿಕದ ಸಂಸ್ಥೆಗಳು ಬ್ರೆಜಿಲ್‌ನಲ್ಲಿ ನಡೆಸುತ್ತಿರುವ ಬೇಹುಗಾರಿಕೆ ಚಟುವಟಿಕೆ, ಇಂಟರ್‌ನೆಟ್‌ಗೆ ಕನ್ನ, ದೂರವಾಣಿ ಕದ್ದಾಲಿಸುವಿಕೆ ಮೊದಲಾದವುಗಳನ್ನು ಪತ್ತೆ ಮಾಡಲು ನೆರವು ನಿಡುವುದಾಗಿ ಸ್ನೂಡೆನ್‌ ಭರವಸೆ ನೀಡಿದ್ದಾರೆ. ಈ ಪತ್ರವನ್ನು ಅತಿ ವಿಶ್ವಾಸಾರ್ಹ ಪತ್ರಿಕೆ ‘ಫಲ್ಹಾ ಡಿ ಸಾಪೌಲಾ’ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.