ADVERTISEMENT

ಭದ್ರತಾ ಸಂಬಂಧ ಚರ್ಚೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2013, 19:30 IST
Last Updated 8 ಡಿಸೆಂಬರ್ 2013, 19:30 IST

ವಾಷಿಂಗ್ಟನ್‌ (ಪಿಟಿಐ): ಜಂಟಿ ಸೇನಾ ತರಬೇತಿ ಕಾರ್ಯ-­ಕ್ರಮಗಳನ್ನು ಹಮ್ಮಿ­ಕೊ­ಳ್ಳುವುದರ ಮೂಲಕ ಭದ್ರತಾ ಕ್ಷೇತ್ರಕ್ಕೆ ಸಂಬಂಧಿಸಿದ ದ್ವಿಪಕ್ಷೀಯ ಸಂಬಂಧ ವೃದ್ಧಿಸುವ ಕುರಿತು ಭಾರ­ತೀಯ ಸೇನೆಯ ಮುಖ್ಯಸ್ಥ ಜನರಲ್‌ ಬಿಕ್ರಮ ಸಿಂಗ್‌ ಮತ್ತು ಅಮೆರಿಕ ಸೇನೆಯ ಹಿರಿಯ ಅಧಿಕಾ­ರಿಗಳು ಚರ್ಚೆ ನಡೆಸಿದರು.

ಅಮೆರಿಕಕ್ಕೆ ನಾಲ್ಕು ದಿನದ ಪ್ರವಾಸ ಕೈಗೊಂಡಿರುವ ಸಿಂಗ್‌ ಅಮೆರಿಕ ಸರ್ಕಾರದ ಹಿರಿಯ ಅಧಿಕಾರಿಗಳನ್ನೂ ಭೇಟಿ ಮಾಡಿದರು.
ಸೇನಾ ಸಹಕಾರ ಮತ್ತು ಅವಕಾಶಗಳ ಕುರಿತು ಸಿಂಗ್‌ ಮತ್ತು ಅಮೆರಿಕ ಸೇನೆಯ ಮುಖ್ಯಸ್ಥ ಜನರಲ್‌ ರಾಯ್‌ ಒಡಿಯೆರ್ನೊ ಮಾತುಕತೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.