ADVERTISEMENT

ಭಯೋತ್ಪಾದಕರ ಮೇಲೆ ಕ್ರಮಕೈಗೊಳ್ಳಿ: ಟ್ರಂಪ್

ಪಿಟಿಐ
Published 14 ಮೇ 2018, 19:30 IST
Last Updated 14 ಮೇ 2018, 19:30 IST
ಭಯೋತ್ಪಾದಕರ ಮೇಲೆ ಕ್ರಮಕೈಗೊಳ್ಳಿ: ಟ್ರಂಪ್
ಭಯೋತ್ಪಾದಕರ ಮೇಲೆ ಕ್ರಮಕೈಗೊಳ್ಳಿ: ಟ್ರಂಪ್   

ವಾಷಿಂಗ್ಟನ್: ಫ್ರಾನ್ಸ್‌ನಲ್ಲಿ ಇಸ್ಲಾಮಿಕ್‌ ಸ್ಟೇಟ್‌ ಉಗ್ರರು ನಡೆಸಿದ ದಾಳಿ ಬಗ್ಗೆ ಪ್ರತಿಕ್ರಿಯಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್, ‘ರಾಷ್ಟ್ರಗಳ ಕಣ್ತೆರೆಯಬೇಕಿದೆ ಮತ್ತು ಪ್ರತಿ ದೇಶವೂ ಭಯೋತ್ಪಾದಕ ಚಟುವಟಿಕೆ ನಿಭಾಯಿಸುವುದು ಹೇಗೆ ಎಂಬುದರ ಬಗ್ಗೆ ಚಿಂತಿಸಬೇಕಿದೆ’ ಎಂದಿದ್ದಾರೆ.

‘ಪ್ಯಾರಿಸ್‌ನಲ್ಲಿ 2015ರಿಂದ ಇದುವರೆಗೆ ಸರಣಿ ದಾಳಿಗಳನ್ನು ನಡೆಸಿ,  246 ನಾಗರಿಕರನ್ನು ಜಿಹಾದಿಗಳು ಕೊಂದಿದ್ದಾರೆ. ಈ ಕುರಿತು ಪ್ಯಾರಿಸ್‌ ಗಂಭೀರವಾಗಿ ಚಿಂತಿಸಬೇಕು. ಈ ಭಯೋತ್ಪಾದಕ ಕೃತ್ಯಗಳನ್ನು ನೋಡಲು ಬೇಸರವಾಗುತ್ತಿದೆ’ ಎಂದಿದ್ದಾರೆ.

‘ಪ್ರೀತಿ, ಶಾಂತಿ ನೆಲೆಸಿದ್ದ ರಾಷ್ಟ್ರದಲ್ಲಿ ಇಂಥ ಘಟನೆಗಳಾಗುತ್ತಿರುವುದು ಖೇದದ ಸಂಗತಿ. ಈ ಪರಿಸ್ಥಿತಿ ಬದಲಾಯಿಸಿಬೇಕು’ ಎಂದು ಟ್ವೀಟ್‌ ಮಾಡಿದ್ದಾರೆ.

ADVERTISEMENT

‘ಅಮೆರಿಕ ಹಾಗೂ ನಮ್ಮ ಜತೆಗಾರರು ಭಯೋತ್ಪಾದನೆ ಎಂಬ ರಾಕ್ಷಸೀಯ ಸಿದ್ಧಾಂತ ಬೆಂಬಲಿಸುವ ರಾಷ್ಟ್ರಗಳನ್ನು ಬಹಿಷ್ಕರಿಸುತ್ತೇವೆ. ಈ ದೇಶಗಳಿಗೆ ಸಂದಾಯವಾಗುತ್ತಿರುವ ಅನುದಾನ ಕಡಿತಗೊಳಿಸುತ್ತೇವೆ. ಮುಗ್ಧ ಜನರನ್ನು ಕ್ರೂರವಾಗಿ ಕೊಲ್ಲುವವರ ಮೇಲೆ ಕರುಣೆ ತೋರುವ ಅಗತ್ಯವಿಲ್ಲ’ ಎಂದಿದ್ದಾರೆ.

ಶನಿವಾರ ಕೇಂದ್ರ ಪ್ಯಾರೀಸ್‌ನಲ್ಲಿ ಚೆಚನ್ಯದ 20 ವರ್ಷದ ಉಗ್ರನೊಬ್ಬ ಚಾಕುವಿನಿಂದ ಇರಿದ ಪರಿಣಾಮ ಒಬ್ಬ ವ್ಯಕ್ತಿ ಮೃತಪಟ್ಟು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.