ಲಾಹೋರ್ (ಪಿಟಿಐ): ಭಾರತದ ಎರಡು ಯುದ್ಧ ವಿಮಾನಗಳು ಪಾಕಿಸ್ತಾನದ ವಾಯು ಗಡಿಯನ್ನು ಉಲ್ಲಂಘಿಸಿ ಏಳು ಕಿ. ಮೀ. ಒಳಗಡೆ ಬಂದಿದ್ದವು ಎಂದು ಪಾಕಿಸ್ತಾನದ ಅಧಿಕಾರಿಗಳು ಆಪಾದನೆ ಮಾಡಿದ್ದಾರೆ.
ಪಂಜಾಬ್ ಪ್ರಾಂತ್ಯದ ರಾಜಧಾನಿ ಲಾಹೋರ್‌ನಿಂದ 200 ಕಿ. ಮೀ. ದೂರದಲ್ಲಿ ಪಾಕ್‌ಪಟ್ಟಣ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
ಪಾಕಿಸ್ತಾನದ ಗಡಿ ಪ್ರವೇಶಿಸಿದ ಯುದ್ಧ ವಿಮಾನಗಳು 2 ನಿಮಿಷ ಹಾರಾಟ ನಡೆಸಿವೆ ಎಂದು ಪಾಕಿಸ್ತಾನದ ಅಧಿಕಾರಿಗಳು ತಿಳಿಸಿದ್ದಾರೆ.
ದಾಳಿ ನಡೆಸಲು ಪಾಕಿಸ್ತಾನ ವಾಯು ಪಡೆಯ ವಿಮಾನಗಳು ಸನ್ನದ್ಧವಾಗಿದ್ದನ್ನು ಕಂಡು ಭಾರತದ ವಿಮಾನಗಳು ವಾಪಸಾದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ ಈ ಆಪಾದನೆಯನ್ನು ತಳ್ಳಿ ಹಾಕಿರುವ ಭಾರತದ ವಾಯುಪಡೆಯು, ಭಾರತದ ಪೈಲಟ್‌ಗಳು ಗಡಿ ದಾಟಿ ಹೋಗಿಲ್ಲ ಎಂದು ಸ್ಪಷ್ಟಪಡಿಸಿದೆ.
ತರಬೇತಿಯಲ್ಲಿ ಇದ್ದ ಯುದ್ಧ ವಿಮಾನಗಳು ಪಾಕಿಸ್ತಾನ ಗಡಿಗೆ ತೀರಾ ಸಮೀಪದಲ್ಲಿ ಸಾಗಿದ್ದು ನಿಜ, ಆದರೆ ಗಡಿ ಉಲ್ಲಂಘನೆ ಮಾಡಿಲ್ಲ, ಇದೊಂದು ತಾಂತ್ರಿಕ ಲೋಪ ಎಂದು ವಾಯುಪಡೆ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.