ADVERTISEMENT

ಭಾರತದಿಂದ ಪಾಕ್ ಪಾಠ ಕಲಿಯಲಿ

​ಪ್ರಜಾವಾಣಿ ವಾರ್ತೆ
Published 21 ಜನವರಿ 2011, 19:30 IST
Last Updated 21 ಜನವರಿ 2011, 19:30 IST

ಇಸ್ಲಾಮಾಬಾದ್ (ಪಿಟಿಐ): ಕ್ಯಾಂಟೀನ್‌ಗಳ ಕಾರ್ಯನಿರ್ವಹಣೆ ವಿಷಯದಂತಹ ಚಿಕ್ಕಪುಟ್ಟ ವಿಷಯಗಳಲ್ಲಿಯೂ ಭಾರತದ ಸೇನಾ ಪಡೆಯ ಮುಖ್ಯಸ್ಥರು ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಮುಂದೆ ಹಾಜರಾಗುವ ಮೂಲಕ ಪಾರದರ್ಶಕತೆಯನ್ನು ಮೆರೆಯುತ್ತಿದ್ದು, ಅಂತಹ ಪಾಠವನ್ನು ಪಾಕಿಸ್ತಾನ ಸಹ ಭಾರತವನ್ನು ನೋಡಿ ಕಲಿಯಬೇಕಾಗಿದೆ ಎಂದು ವಿರೋಧ ಪಕ್ಷದ ನಾಯಕ ಚೌಧರಿ ನಿಸಾರ್ ಅಲಿ ಖಾನ್ ಹೇಳಿದ್ದಾರೆ.

ಪಾಕಿಸ್ತಾನದ ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ)ಯ  ಅಧ್ಯಕ್ಷರೂ ಆಗಿರುವ ಖಾನ್, ಗುರುವಾರ ಸಭೆಯಲ್ಲಿ ರಕ್ಷಣಾ ಸಚಿವಾಲಯದ ಲೆಕ್ಕಪರಿ ಶೋಧನೆ ವೇಳೆ ಈ ಪ್ರತಿಕ್ರಿಯೆ ನೀಡಿದ್ದಾರೆ.

ಶೇ 98 ಸೇನಾ ಪಡೆಗಳ ಸಿಬ್ಬಂದಿಯಲ್ಲಿ ಶಿಸ್ತಿದ್ದರೂ ಕೂಡ, ಆಡಳಿತ ವ್ಯವಹಾರಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದಲ್ಲಿ ಪಾರದರ್ಶಕತೆಯ ಕೊರತೆ ಏಕಿದೆ? ಎಂದು ಅವರು ನಿವೃತ್ತ ರಕ್ಷಣಾ ಕಾರ್ಯದರ್ಶಿ ಅಥರ್ ಅಲಿ ಅವರನ್ನು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.