ADVERTISEMENT

‘ಭಾರತದೊಂದಿಗೆ ಮಾತುಕತೆಗೆ ಪಾಕ್‌ ಸೇನಾ ಮುಖ್ಯಸ್ಥ ಉತ್ಸುಕ’

ಪಿಟಿಐ
Published 7 ಮೇ 2018, 3:07 IST
Last Updated 7 ಮೇ 2018, 3:07 IST

ಲಂಡನ್‌: ಶಾಂತಿ ಮತ್ತು ಸೌಹಾರ್ದ ಸಂಬಂಧ ವೃದ್ಧಿಸಿಕೊಳ್ಳುವ ನಿಟ್ಟಿನಲ್ಲಿ ಭಾರತದೊಂದಿಗೆ ಮಾತುಕತೆ ನಡೆಸಲು ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಖಮರ್‌ ಜಾವೇದ್‌ ಬಜ್ವಾ ಉತ್ಸುಕರಾಗಿದ್ದಾರೆ ಎಂದು ಪಾಕಿಸ್ತಾನದ ವಿಶ್ಲೇಷಕರೊಬ್ಬರು ಬ್ರಿಟಿಷ್‌ ಮಾಧ್ಯಮಗಳಲ್ಲಿ ಹೇಳಿಕೊಂಡಿದ್ದಾರೆ.

ಪಾಕಿಸ್ತಾನ ದಿವಸ್‌ ಅಂಗವಾಗಿ ಭಾರತೀಯ ಸೇನೆಯ ಸಂಜಯ್ ವಿಶ್ವಾಸ್‌ರಾವ್‌ ಮತ್ತು ತಂಡವನ್ನು ಕಳೆದ ತಿಂಗಳು ಇಸ್ಲಾಮಾಬಾದ್‌ನಲ್ಲಿ ನಡೆದ ಮಿಲಿಟರಿ ಪರೇಡ್‌ಗೆ ಬಜ್ವಾ ಆಹ್ವಾನಿಸಿದ್ದರು ಎಂದು ವಿಶ್ಲೇಷಕ ಕಮಲ್‌ ಆಲಂ ಬರೆದಿದ್ದಾರೆ.

ಕಾರ್ಮಿಕರ ಸಾವು

ADVERTISEMENT

ಇಸ್ಲಾಮಾಬಾದ್‌ : ಪಾಕಿಸ್ತಾನದ ನೈರುತ್ಯ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಅನಿಲ ಸ್ಫೋಟದಿಂದಾಗಿ ಎರಡು ಗಣಿಗಳು ಕುಸಿದು ಬಿದ್ದು 23 ಕಾರ್ಮಿಕರು ಮೃತಪಟ್ಟಿದ್ದಾರೆ.

ಬಲೂಚಿಸ್ತಾನ ಪ್ರಾಂತ್ಯದ ರಾಜಧಾನಿ ಕ್ವೆಟ್ಟಾದಿಂದ 45 ಕಿಲೊ ಮೀಟರ್‌ ದೂರದಲ್ಲಿರುವ ಮರವ್ಹಾ ಗಣಿಯಲ್ಲಿ ಮಿಥೇಲ್‌ ಅನಿಲ ಸಂಗ್ರಹ
ದಿಂದಾಗಿ ಸ್ಫೋಟ ಸಂಭವಿಸಿತು. ಪರಿಣಾಮವಾಗಿ 16 ಗಣಿ ಕಾರ್ಮಿಕರು ಮೃತಪಟ್ಟಿದ್ದು, ಎಲ್ಲರ ಶವಗಳನ್ನು ಹೊರಕ್ಕೆ ತೆಗೆಯಲಾಗಿದೆ.

ಸ್ಫೋಟ: 30 ಸಾವು

ಕಾಬೂಲ್‌ (ಎಪಿ): ಅಫ್ಗಾನಿಸ್ತಾನದ ಪೂರ್ವ ಖೋಸ್ಟ್‌ ಪ್ರಾಂತ್ಯದಲ್ಲಿನ ಪ್ರಾರ್ಥನಾ ಮಂದಿರಲ್ಲಿ ಭಾನುವಾರ ನಡೆದ ಬಾಂಬ್‌ ಸ್ಫೋಟದಿಂದಾಗಿ ಕನಿಷ್ಠ 30 ಜನ ಮೃತಪಟ್ಟಿದ್ದಾರೆ.

ಪ್ರಾರ್ಥನಾ ಮಂದಿರವನ್ನು ಮತದಾರರ ನೋಂದಣಿ ಕೇಂದ್ರವಾಗಿ ಬಳಕೆ ಮಾಡಲಾಗುತ್ತಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದಾಳಿಯ ಹೊಣೆಯನ್ನು ಇದುವರೆಗೆ ಯಾರೂ ಹೊತ್ತುಕೊಂಡಿಲ್ಲ. ಐಎಸ್‌ ಆತ್ಮಾಹುತಿ ಬಾಂಬರ್‌ ಕಳೆದ ತಿಂಗಳು ಕಾಬೂಲ್‌ನಲ್ಲಿನ ಮತದಾರರ ನೋಂದಣಿ ಕೇಂದ್ರದ ಮೇಲೆ ದಾಳಿ ನಡೆಸಿದ್ದರಿಂದ 60 ಜನರು ಮೃತಪಟ್ಟು, 130ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.