ಜೆರುಸಲೇಂ: ಭಾರತೀಯ ನೌಕಾಪಡೆಯ ನಾಲ್ಕು ಹಡಗುಗಳಿಗೆ, ಸುಧಾರಿತ ದೂರಗಾಮಿ ವೈಮಾನಿಕ ಮತ್ತು ಕ್ಷಿಪಣಿ ರಕ್ಷಣಾ ತಂತ್ರಜ್ಞಾನವನ್ನು ಇಸ್ರೇಲ್ ಒದಗಿಸಲಿದೆ.
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ನ (ಬಿಇಎಲ್) ಸಹಯೋಗದಲ್ಲಿ ಪೂರೈಕೆಯಾಗುವ ಈ ಹೊಸ ವ್ಯವಸ್ಥೆಯು, ಅತ್ಯಾಧುನಿಕ ರಕ್ಷಣಾ ತಂತ್ರಜ್ಞಾನಗಳನ್ನು ಒಳಗೊಂಡಿದೆ. ಹಲವು ಬಗೆಯ ವೈಮಾನಿಕ ಮತ್ತು ನೌಕಾ ದಾಳಿಯಿಂದ ಇದು ಹೆಚ್ಚಿನ ರಕ್ಷಣೆ ನೀಡಬಲ್ಲದು.