ADVERTISEMENT

ಭಾರತೀಯರಿಗೆ ಹೆಚ್ಚಿನ ವೀಸಾ: ಅಮೆರಿಕ ಸೆನೆಟರ್ ಭರವಸೆ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2012, 19:30 IST
Last Updated 25 ಮಾರ್ಚ್ 2012, 19:30 IST

ನ್ಯೂಯಾರ್ಕ್ (ಪಿಟಿಐ): ಭಾರತೀಯ ಮೂಲದ ಮಾಹಿತಿ ತಂತ್ರಜ್ಞಾನ ಕಂಪೆನಿಗಳಿಂದ ವ್ಯಕ್ತವಾದ ತೀವ್ರ ಆಕ್ಷೇಪದ ಹಿನ್ನೆಲೆಯಲ್ಲಿ, ಅಮೆರಿಕದ ವೀಸಾ ನೀತಿ-ಯನ್ನು ಮತ್ತಷ್ಟು ಸರಳಗೊಳಿಸುವ ಮಸೂದೆ ಜಾರಿಗೆ ಚಿಂತಿಸುತ್ತಿರುವುದಾಗಿ ಅಮೆರಿಕದ ಇಬ್ಬರು ಸೆನೆಟರ್‌ಗಳು ಹೇಳಿದ್ದಾರೆ. 

ಹೆಚ್ಚಿನ ಸಂಖ್ಯೆಯ ಭಾರತೀಯ ಐ.ಟಿ ಉದ್ಯೋಗಿಗಳು ಬರಲು ಅನುಕೂಲವಾಗುವಂತೆ ದ್ವಿಪಕ್ಷೀಯ ಮಸೂದೆ ಜಾರಿಗೆ ಪ್ರಯತ್ನಿಸುತ್ತಿರುವುದಾಗಿ ನ್ಯೂಯಾರ್ಕ್ ಸೆನೆಟರ್ ಚಕ್ ಶೂಮಾರ್ ಹ್ಯಾರಿ ರೀಡ್ ಹೇಳಿದ್ದಾರೆ.

ಮಸೂದೆ ಜಾರಿಯಾದಲ್ಲಿ ಅಮೆರಿಕದ ವಲಸೆ ನೀತಿಯಲ್ಲಿ ವ್ಯಾಪಕ ಬದಲಾವಣೆಗಳಾಗಿ ಭಾರತೀಯ ಐ.ಟಿ ಉದ್ಯೋಗಿಗಳಿಗೆ ಸುಲಭ ವೀಸಾ ದೊರೆಯುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.

ಈ ಇಬ್ಬರೂ ಸೆನೆಟರ್‌ಗಳು ಈ ವಿಷಯ ತಿಳಿಸಿದ್ದಾಗಿ ಭಾರತೀಯ ಹೋಟೆಲ್ ಉದ್ಯಮಿ ಮತ್ತು ಭಾರತ-ಅಮೆರಿಕ ಪ್ರಜಾಸತ್ತಾತ್ಮಕ ಸಂಘದ ಅಧ್ಯಕ್ಷ ಸಾಂತಾ ಸಿಂಗ್ ಮಾಹಿತಿ ನೀಡಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.