ADVERTISEMENT

ಭಾರತ ಮೂಲದ ಪ್ರಮೀಳಾ ಅಮೆರಿಕ ಕಾಂಗ್ರೆಸ್‌ಗೆ?

ಪಿಟಿಐ
Published 7 ನವೆಂಬರ್ 2016, 19:30 IST
Last Updated 7 ನವೆಂಬರ್ 2016, 19:30 IST
ಪ್ರಮೀಳಾ ಜೈಪಾಲ್‌
ಪ್ರಮೀಳಾ ಜೈಪಾಲ್‌   

ವಾಷಿಂಗ್ಟನ್‌: ಭಾರತ ಮೂಲದ ಅಮೆರಿಕ ಪ್ರಜೆ, ವಾಷಿಂಗ್ಟನ್ ಸೆನೆಟ್ ಸದಸ್ಯೆ ಪ್ರಮೀಳಾ ಜೈಪಾಲ್‌ ಅವರು ಅಮೆರಿಕ ಕಾಂಗ್ರೆಸ್‌ಗೆ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಈ ಮೂಲಕ ಈ ಸ್ಥಾನಕ್ಕೇರಿದ ದಕ್ಷಿಣ ಏಷ್ಯಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಲಿದ್ದಾರೆ.
ಪ್ರಮೀಳಾ ಅವರು ಬ್ರೆಡಿ ಪಿನೆಟೊ ವಾಕಿನ್ಷಾ ಅವರಿಗಿಂತ ಶೇ 2ರಷ್ಟು ಮುನ್ನಡೆ ಸಾಧಿಸಿದ್ದಾರೆ ಎಂದು ಇತ್ತೀಚಿನ ಸಮೀಕ್ಷೆ ತಿಳಿಸಿತ್ತು.

ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿಯಾಗುವ ಆಕಾಂಕ್ಷೆ ಹೊಂದಿದ್ದ ಸೆನೆಟರ್‌ ಬರ್ನಿ ಸ್ಯಾಂಡರ್ಸ್‌ ಅವರ ಬೆಂಬಲ ಜೈಪಾಲ್‌ ಅವರಿಗೆ ಇದೆ.

ಚೆನ್ನೈ ಮೂಲದವರಾದ ಪ್ರಮೀಳಾ ಅವರು ಐದನೇ ವಯಸ್ಸಿನಲ್ಲಿ ಇಂಡೊನೇಷ್ಯಾ, ಸಿಂಗಪುರಕ್ಕೆ ತೆರಳಿದ್ದರು. ಬಳಿಕ ಅಮೆರಿಕದಲ್ಲಿ ನೆಲೆಸಿದ್ದರು.  ಭಿನ್ನ ದೃಷ್ಟಿಕೋನದೊಂದಿಗೆ ಕೆಲಸ ನಿರ್ವಹಿಸುವ ಮೂಲಕ ಅಮೆರಿಕ ಕಾಂಗ್ರೆಸ್‌ಗೆ ಉತ್ತಮ ಸೇವೆ ಸಲ್ಲಿಸಬೇಕೆಂಬ ಮಹತ್ವಾಕಾಂಕ್ಷೆಯನ್ನು ಪ್ರಮೀಳಾ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.