ADVERTISEMENT

ಭಾರತ ಸಂಜಾತ: ಬ್ರಿಟನ್‌ನ ಅತಿ ಕಿರಿಯ ಶ್ರೀಮಂತ

ಪಿಟಿಐ
Published 16 ಅಕ್ಟೋಬರ್ 2017, 20:03 IST
Last Updated 16 ಅಕ್ಟೋಬರ್ 2017, 20:03 IST
ಅಕ್ಷಯ್‌ ರುಪರೇಲಿಯಾ
ಅಕ್ಷಯ್‌ ರುಪರೇಲಿಯಾ   

ಲಂಡನ್‌: ಭಾರತ ಸಂಜಾತ ಯುವಕನೊಬ್ಬ ಬ್ರಿಟನ್‌ನ ಅತಿ ಕಿರಿಯ ಶ್ರೀಮಂತ ಎಂದು ಖ್ಯಾತಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾನೆ. ಈತನ ‘ಆನ್‌ಲೈನ್‌ ಎಸ್ಟೇಟ್‌ ಏಜೆನ್ಸಿ’ ವ್ಯವಹಾರವೊಂದು ಒಂದು ವರ್ಷದಲ್ಲೇ ₹103.10 ಕೋಟಿ ಗಳಿಸಿದೆ.

ಅಕ್ಷಯ್‌ ರುಪರೇಲಿಯಾ (19)ಕಾಲೇಜು ವ್ಯಾಸಂಗ ಮಾಡುತ್ತಿದ್ದು, ಅಧ್ಯಯನದ ನಡುವೆಯೇ ವ್ಯವಹಾರ ನಡೆಸಿದ್ದಾನೆ.

ಈತನ doorsteps.co.uk ಆನ್‌ಲೈನ್‌ ಉದ್ಯಮ 18 ನೇ ಅತಿದೊಡ್ಡ ಎಸ್ಟೇಟ್‌ ಏಜೆನ್ಸಿ ಎಂದು ಹೆಸರು ಪಡೆದಿದೆ. ಆಸ್ತಿ ಮಾರಾಟದ ವ್ಯವಹಾರವನ್ನು ಈ ಏಜೆನ್ಸಿ ನಡೆಸುತ್ತದೆ. 7 ಸಾವಿರ ಪೌಂಡ್‌ನಿಂದ ಆರಂಭವಾದ ಉದ್ಯಮದಲ್ಲಿ ಈಗ 12 ಮಂದಿ ನೌಕರರಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.