ಅಡಿಸ್ ಅಬಾಬ (ಐಎಎನ್ಎಸ್): ಇಥಿಯೋಪಿಯಾದಲ್ಲಿ ಶಾಲಾ ಪಠ್ಯಪುಸ್ತಕಗಳನ್ನು ಮುದ್ರಿಸಿ ಅವನ್ನು ಮಕ್ಕಳಿಗೆ ವಿತರಿಸುವ ಜಾಗತಿಕ ಟೆಂಡರ್ನಲ್ಲಿ ಭಾರತದ ಎರಡು ಕಂಪೆನಿಗಳು ಆಯ್ಕೆಯಾಗಿವೆ.
59 ಲಕ್ಷ ಡಾಲರ್ಗಳ ಈ ಕಾರ್ಯ ಮುಂಬೈನ ರಿಪ್ರೊ ಪ್ರಿಂಟರ್ಸ್ ಮತ್ತು ಉತ್ತರ ಪ್ರದೇಶದ ಝಾನ್ಸಿಯ ಪೀತಾಂಬರ ಬುಕ್ಸ್ಗಳ ಪಾಲಾಗಿದೆ. ವಿವಿಧ ರಾಷ್ಟ್ರಗಳ 19 ಕಂಪೆನಿಗಳು ಟೆಂಡರ್ನಲ್ಲಿ ಭಾಗವಹಿಸಿ ತೀವ್ರ ಸ್ಪರ್ಧೆ ಒಡ್ಡಿದ್ದರ ನಡುವೆಯೂ ಈ ಕಂಪೆನಿಗಳು ಆಯ್ಕೆಯಾಗಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.