ADVERTISEMENT

ಭಾವುಕರಾದ ಒಬಾಮ...

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2012, 19:30 IST
Last Updated 7 ನವೆಂಬರ್ 2012, 19:30 IST

ವಾಷಿಂಗ್ಟನ್: ತಮ್ಮ ಪ್ರತಿಸ್ಪರ್ಧಿ ಮಿಟ್ ರೋಮ್ನಿ ವಿರುದ್ಧ ಚುನಾವಣಾ ಪ್ರಚಾರದ ವೇಳೆ ತಮ್ಮ ಕಟ್ಟಕಡೆಯ ಭಾಷಣದಲ್ಲಿ ಒಬಾಮ ಭಾವೋದ್ರೇಕಕ್ಕೆ ಒಳಗಾಗಿ ಕಣ್ಣೀರು ಸುರಿಸಿದರು.

ಕ್ಲಿಂಟನ್‌ಗೆ ಕೃತಜ್ಞತೆ:
ಚುನಾವಣೆ ವೇಳೆ ತಮ್ಮ ಪರ ಪ್ರಚಾರ ಕೈಗೊಂಡ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರಿಗೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

ರೋಮ್ನಿ ಶುಭಾಶಯ: ಈ ಮಧ್ಯೆ ಚುನಾವಣೆಯಲ್ಲಿ ಪರಾಜಯಗೊಂಡ ಮಿತ್ ರೋಮ್ನಿ ಜಯಗಳಿಸಿದ ಒಬಾಮಾಗೆ ಶುಭಾಶಯ ಕೋರಿದರಲ್ಲದೆ ಸವಾಲುಗಳ ನಡುವೆ ದೇಶವನ್ನು ಮುನ್ನಡೆಸಿಕೊಂಡು ಹೋಗುವಲ್ಲಿ ಜಯಗಳಿಸುವಂತೆ ಹಾರೈಸಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.