
ಪ್ರಜಾವಾಣಿ ವಾರ್ತೆಬರ್ಲಿನ್ (ಪಿಟಿಐ): ಕಳೆದ ಒಂದು ದಶಕದಿಂದ ನಿಷ್ಕ್ರಿಯವಾಗಿ ಬಾಹ್ಯಾಕಾಶದಲ್ಲಿ ಸುತ್ತುತ್ತಿದ್ದ ಜರ್ಮನಿಯ ಉಪಗ್ರಹ ರೊಸ್ಯಾಟ್ ಭಾನುವಾರ ಸಂಜೆ ಭೂಮಿಯ ಕಕ್ಷೆಯನ್ನು ತಲುಪಿದೆ.
ಭಾರತೀಯ ಕಾಲಮಾನ ಸಂಜೆ 6.45ರ ವೇಳೆಗೆ ಸುಮಾರು 2.7 ಟನ್ ತೂಕದ ಬಸ್ ಗಾತ್ರದ ಉಪಗ್ರಹ ಭೂಮಿಯ ಕಕ್ಷೆಯನ್ನು ದಾಟಿರುವುದನ್ನು ವಿಜ್ಞಾನಿಗಳು ಖಚಿತ ಪಡಿಸಿದ್ದಾರೆ.
ಭೂಮಿಯ ಮೇಲೆ ಉಪಗ್ರಹದ ಚೂರುಗಳು ಬಿದ್ದಿವೆಯೇ ಎನ್ನುವ ಕುರಿತು ಮಾಹಿತಿ ಇಲ್ಲ. ಜತೆಗೆ ಯಾವ ಸ್ಥಳಗಳಲ್ಲಿ ಈ ತುಣುಕುಗಳು ಹರಡಿ ಬಿದ್ದಿವೆ ಎನ್ನುವುದೂ ಗೊತ್ತಾಗಿಲ್ಲ ಎಂದು ಜರ್ಮನಿಯ ಬಾಹ್ಯಾಕಾಶ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.