ವಾಷಿಂಗ್ಟನ್ (ಪಿಟಿಐ): ನಾಸಾದ `ಕ್ಯೂರಿಯಾಸಿಟಿ' ರೋವರ್ ಮಂಗಳನ ಅಂಗಳದಲ್ಲಿ ಭಾರಿ ಸುಂಟರಗಾಳಿಯನ್ನು ಪತ್ತೆ ಮಾಡಿದೆ.
ಇದರಿಂದಾಗಿಯೇ ಕೆಂಪು ಗ್ರಹದ ಮೇಲಿನ ವಾತಾವರಣ ಬದಲಾಗುತ್ತಿದೆ ಎನ್ನಲಾಗಿದೆ.
ವಾಯುಭಾರ ಕುಸಿತ ಮತ್ತು ರಾತ್ರಿ ವೇಳೆ ಹವಾಮಾನದಲ್ಲಿ ಸ್ವಲ್ಪಮಟ್ಟಿನ ಬದಲಾವಣೆ ಆಗುವುದನ್ನು ರೋವರ್ ಸಂವೇದಕಗಳು ಗುರುತಿಸಿವೆ. `ಕೆಂಪು ಗ್ರಹದ ಒಂದು ನಿರ್ದಿಷ್ಟ ಭಾಗದಲ್ಲಿ ಸುಂಟರಗಾಳಿ ಕಾಣಿಸಿಕೊಂಡಿದ್ದು, ಇಡೀ ಗ್ರಹದ ವಾತಾವರಣದಲ್ಲಿ ಧೂಳು ಆವರಿಸಿಕೊಂಡಿದೆ' ಎಂದು ಪಸೆಡೆನಾದ ನಾಸಾ ಪ್ರಯೋಗಾಲಯದ ಮುಖ್ಯ ವಿಜ್ಞಾನಿ ರಿಚ್ ಜುರೆಕ್ ತಿಳಿಸಿದ್ದಾರೆ. 2001 ಮತ್ತು 2007ರಲ್ಲಿ ಕೂಡ ಮಂಗಳ ಗ್ರಹದಲ್ಲಿ ಸುಂಟರಗಾಳಿ ಕಂಡುಬಂದಿತ್ತು.
` ಮಂಗಳನಲ್ಲಿ ಕೆಲವು ಧೂಳಿನ ಕಣಗಳು ವೃದ್ಧಿಸುವುದಿಲ್ಲ. ಮತ್ತೆ ಕೆಲವು ಕಣಗಳು ವೃದ್ಧಿಯಾಗುತ್ತಲೇ ಇರುತ್ತವೆ. ಇವುಗಳ ಕಾರಣವನ್ನು ತಿಳಿದುಕೊಳ್ಳುವುದಕ್ಕೆ ಅಧ್ಯಯನ ನಡೆಸಬೇಕಿದೆ' ಎಂದೂ ಜುರೆಕ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.