ಲಂಡನ್ (ಪಿಟಿಐ): ಮಂಗಳ ಗ್ರಹದಲ್ಲಿ ಜೀವಸಂಕುಲ ಬದುಕಲು ಅಸಾಧ್ಯ ಎಂದು ಬ್ರಿಟನ್ ವಿಜ್ಞಾನಿಗಳ ತಂಡವೊಂದು ಸ್ಪಷ್ಟ ಪಡಿಸಿದೆ.
ಅಷ್ಟರಮಟ್ಟಿಗೆ ಅಲ್ಲಿನ ವಾತಾ ವರಣ ಶುಷ್ಕವಾಗಿದೆ ಎಂದೂ ಇಲ್ಲಿಂದ ಪ್ರಕಟವಾಗುವ `ಜಿಯೋ ಫಿಸಿಕಲ್ ರಿಸರ್ಚ್ ಲೆಟರ್ಸ್~ ನಿಯತಕಾಲಿಕದಲ್ಲಿ ಸಂಶೋಧನಾ ವರದಿಯೊಂದು ಪ್ರಕಟಗೊಂಡಿದೆ.
ಮಂಗಳ ಗ್ರಹದಲ್ಲಿ ಅಮೆರಿಕಾದ `ನಾಸಾ~ ಸಂಸ್ಥೆಯ ಫೀನಿಕ್ಸ್ ಬಾಹ್ಯಾಕಾಶ ಕಾರ್ಯಕ್ರಮದ ಅನ್ವಯ 2008ರಲ್ಲಿ ಸಂಗ್ರಹಿಸಲಾದ ಮಣ್ಣನ್ನು ಸಂಶೋಧನೆಗೆ ಒಳ ಪಡಿಸಿದಾಗ ಈ ಸತ್ಯ ಹೊರಬಿದ್ದಿದೆ ಎಂದೂ ಆ ವರದಿಯಲ್ಲಿ ತಿಳಿಸಲಾಗಿದೆ.
ಸುಮಾರು ಮೂರು ವರ್ಷಗಳ ಸತತ ಸಂಶೋಧನೆಯ ನಂತರ ಈ ತೀರ್ಮಾನಕ್ಕೆ ಬರಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.