ಬೀಜಿಂಗ್(ಪಿಟಿಐ): ‘ಮಂಗಳ ಗ್ರಹದ ಮೇಲೆ ಸಂಶೋಧನೆ ನಡೆಸಲು ಚೀನಾ ದೇಶಕ್ಕೆ ಸಾಮರ್ಥ್ಯ ಇದೆ. ಕೆಂಪು ಗ್ರಹಕ್ಕೆ ಉಪಗ್ರಹ ಕಳುಹಿಸುವ ಕುರಿತು ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ’ ಎಂದು ಚೀನಾದ ಚಾಂಗ್–3 ಚಂದ್ರಯಾನ ಯೋಜನೆಯ ಹಿರಿಯ ವಿಜ್ಞಾನಿ ಹೇಳಿದ್ದಾರೆ.
‘ಮಂಗಳನ ಕಕ್ಷೆಗೆ ಉಪಗ್ರಹವನ್ನು ಕಳುಹಿಸುವುದು ಮತ್ತು ಗ್ರಹದ ಕುರಿತು ಸಂಶೋಧನೆ ನಡೆಸಲು ಚೀನಾಕ್ಕೆ ಸಾಮರ್ಥ್ಯ ಇದೆ. ಅಲ್ಲದೇ, ಕಳುಹಿಸಿದ ಉಪಗ್ರಹದೊಂದಿಗೆ ಸಂವಹನ ಏರ್ಪಡಿಸುವುದು ಮತ್ತು ಅದರ ಮೇಲೆ ಹಿಡಿತ ಸಾಧಿಸುವುದರಲ್ಲಿ ಯಾವುದೇ ತಂತ್ರಜ್ಞಾನ ಸಮಸ್ಯೆ ಇಲ್ಲ’ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.
ಉಪಗ್ರಹ ಕ್ಷಿಪಣಿಗಳ ಕ್ಷೇತ್ರದಲ್ಲಿ ಚೀನಾ ಅಸಾಧಾರಣ ಬೆಳವಣಿಗೆ ಕಂಡಿದೆ. ಚಾಂಗ್–3 ಚಂದ್ರಯಾನ ಯೋಜನೆ, ಈ ಮುಂಚೆ ಕಾರ್ಯನಿರ್ವಹಿಸುತ್ತಿರುವ ಚಂದ್ರಯಾನ ಯೋಜನೆಯ ವಿಸ್ತೃತ ರೂಪ. ಕಳೆದ ವರ್ಷ ಡಿ. 14 ರಂದು ಚಂದ್ರನ ಅಂಗಳಕ್ಕೆ ಇಳಿದ ಯುಟು ರೋವರ್ ಕೆಲ ಸಮಸ್ಯೆ ಎದುರಿಸಿದ ನಂತರ ಹೊಸ ಯೋಜನೆಯನ್ನು ಸಿದ್ದಪಡಿಸಲಾಗಿದೆ.
.ಭಾರತ ಕಳೆದ ವರ್ಷ ನವೆಂಬರ್‌ನಲ್ಲಿ ಮಂಗಳಗ್ರಹಕ್ಕೆ ಉಪ್ರಗಹ ಕಳುಹಿಸಿದ್ದನ್ನು ಚೀನಾ ಆಸಕ್ತಿಯಿಂದ ವೀಕ್ಷಿಸಿತ್ತು. ಅದೇ ರೀತಿ ಮಂಗಳನ ಮೇಲೆ ಹೊಸ ಉಪಗ್ರಹವನ್ನು ಕಳುಹಿಸಲು ಕಾತರವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.