
ಪ್ರಜಾವಾಣಿ ವಾರ್ತೆ
ಜೋಹಾನ್ಸ್‌ಬರ್ಗ್ (ಪಿಟಿಐ): ಕೊನೆಯುಸಿರೆಳೆದ ದಕ್ಷಿಣ ಆಫ್ರಿಕಾ ನಾಯಕ ನೆಲ್ಸನ್ ಮಂಡೇಲಾ ಗೌರವಾರ್ಥ ಮಂಗಳವಾರ ನಡೆಯಲಿರುವ ಸ್ಮರಣಾ ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಸೇರಿದಂತೆ 70 ರಾಷ್ಟ್ರಗಳ ಗಣ್ಯರು, ರಾಜಕೀ ಯ ಮುಖಂಡರು, ನಾಯಕರು ಆಗಮಿಸಿದ್ದಾರೆ.
2010ರ ವಿಶ್ವಕಪ್ ಫುಟ್ಬಾಲ್ ವೇಳೆ ಮಂಡೇಲಾ ಕೊನೆಯ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಎಫ್‌ಎನ್‌ಬಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಆಯೋಜಿಲಾಗಿದೆ. ಗಣ್ಯರ ಭದ್ರತೆಗಾಗಿ 11 ಸಾವಿರ ಸಿಬ್ಬಂದಿ ನಿಯೋಜಿಸಲಾಗಿದೆ. ಮುಖರ್ಜಿ ನೇತೃತ್ವದ ಭಾರತದ ನಿಯೋಗದಲ್ಲಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ನಾಯಕಿ ಸುಷ್ಮಾ ಸ್ವರಾಜ್, ಸಿಪಿಎಂ ನಾಯಕ ಸೀತಾರಾಂ ಯೆಚೂರಿ ಮುಂತಾದವರು ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.