ಒಸ್ಲೊ (ಪಿಟಿಐ): ಭಾರತೀಯ ಪೋಷಕರ ವಶಕ್ಕೆ ಅವರ ಇಬ್ಬರು ಮಕ್ಕಳನ್ನು ಒಪ್ಪಿಸಲು ನಾರ್ವೆ ಸರ್ಕಾರ ಗುರುವಾರ ಸ್ಪಷ್ಟವಾಗಿ ನಿರಾಕರಿಸಿದ್ದು, ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ನಾಟಕೀಯ ಬೆಳವಣಿಗೆಯ ಹಿನ್ನೆಲೆಯಲ್ಲಿ ಶುಕ್ರವಾರ (ಮಾರ್ಚ್ 23) ನಿಗದಿಯಾಗಿದ್ದ ವಿಚಾರಣೆಯನ್ನು ಸ್ಟಾವೆಂಜರ್ ಜಿಲ್ಲಾ ನ್ಯಾಯಾಲಯ ಕೈಬಿಟ್ಟಿದೆ.
ನಾರ್ವೆಯ ಮಕ್ಕಳ ಕಲ್ಯಾಣ ಸೇವಾ ಸಂಸ್ಥೆ (ಸಿಡಬ್ಲ್ಯೂಎಸ್) ತನ್ನ ವಶದಲ್ಲಿರುವ ಮಕ್ಕಳನ್ನು ಮರಳಿ ಭಾರತಕ್ಕೆ ಕಳಸಿಕೊಡಲು ನಿರಾಕರಿಸಿದೆ.
ಒಂದು ವೇಳೆ ಮಕ್ಕಳನ್ನು ಅವರ ಪೋಷಕರ ವಶಕ್ಕೆ ಒಪ್ಪಿಸಲು ಸ್ವದೇಶಕ್ಕೆ ಕಳಿಸಿದರೆ ಅವರು ಹೊಸ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಾರೆ ಎಂದು ಕಾರಣ ನೀಡಿದೆ.
ಭಾರತೀಯ ಮೂಲದ ಅನುರೂಪ್ ಮತ್ತು ಸಾಗರಿಕಾ ಭಟ್ಟಾಚಾರ್ಯ ತಮ್ಮ ಮಕ್ಕಳನ್ನು ವಶಕ್ಕೆ ಪಡೆಯಲು ನಾರ್ವೆಯ ಮಕ್ಕಳ ಕಲ್ಯಾಣ ಸಂಸ್ಥೆಯೊಂದಿಗೆ ನಡೆಸಿರುವ ಹೋರಾಟ ದಿನೇ ದಿನೇ ರೋಚಕ ತಿರುವು ಪಡೆದುಕೊಳ್ಳುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.