ADVERTISEMENT

ಮಗನಿಗೆ ಹೆಣ್ಣು ಕೇಳಿದ ಮಹಿಳೆಯರಿಗೆ ಬೆತ್ತಲೆಯ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2012, 19:30 IST
Last Updated 8 ಆಗಸ್ಟ್ 2012, 19:30 IST

ಲಾಹೋರ್ (ಪಿಟಿಐ): ಮಗನಿಗೆ ಹೆಣ್ಣು ಕೇಳುವುದಕ್ಕಾಗಿ ಹೋಗಿದ್ದ ಮಹಿಳೆ ಹಾಗೂ ಆಕೆಯ ಗೆಳತಿಯನ್ನು ಬೆತ್ತಲೆಗೊಳಿಸಿ ನಡು ಬೀದಿಯಲ್ಲಿ ಮೆರವಣಿಗೆ ಮಾಡಿದ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಹಳ್ಳಿಯಲ್ಲಿ ಮಂಗಳವಾರ ನಡೆದಿದೆ.

ಸಕೀನಾ ಮತ್ತು ಆಕೆಯ ಗೆಳತಿ ಸಮೀನಾ ಬೆತ್ತಲೆ ಮೆರವಣಿಗೆಯ ಶಿಕ್ಷೆ ಅನುಭವಿಸಿದವರು. ಸಕೀನಾ ತನ್ನ ಮಗ ಶೋಹಿಬ್‌ನಿಗೆ, ಇರ್ಫಾನ್ ಅಹ್ಮದ್ ಮಗಳಾದ ನಬಿಲಾಳನ್ನು ಮದುವೆ ಮಾಡಿಕೊಡುವಂತೆ ಕೇಳಲು ಅವರ ಮನೆಗೆ ಹೋಗಿದ್ದರು.
 
`ಹೆಣ್ಣು ಕೊಡುವ ವಿಷಯದಲ್ಲಿ ಮಾತುಕತೆ ನಡೆಯುವ ವೇಳೆ ಅಹ್ಮದ್ ಕೋಪೋದ್ರಿಕ್ತರಾಗಿ ತನನ್ನು ಹೊಡೆಯಲಾರಂಭಿಸಿದರು. ಅವರೊಂದಿಗೆ ಸಂಬಂಧಿಕರೂ ಸೇರಿಕೊಂಡು ನನ್ನ ಹಾಗೂ ತನ್ನ ಗೆಳತಿಯನ್ನು ಬೆತ್ತಲೆಗೊಳಿಸಿ ನಡುಬೀದಿಯಲ್ಲಿ ಮೆರವಣಿಗೆ ಮಾಡಿದರು~ ಎಂದು ಸಕೀನಾ ತಿಳಿಸಿದ್ದಾರೆ.

ಈ ಘಟನೆಯನ್ನು ಕೆಲವು ಸುದ್ದಿ ವಾಹಿನಿಗಳು ವರದಿ ಮಾಡಿವೆ. ಇನ್ನೂ ಕೆಲವರು ಮೊಬೈಲ್ ಫೋನ್‌ಗಳಲ್ಲಿ ದೃಶ್ಯವನ್ನು ರೆಕಾರ್ಡ್ ಮಾಡಿಕೊಂಡಿರುವುದಾಗಿ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.