ಮಾಸ್ಕೊ (ಐಎಎನ್ಎಸ್/ಆರ್ಐಎ ನೊವೊಸ್ತಿ): ರಷ್ಯದ ಅಮುರ್ ಪ್ರಾಂತ್ಯದ ಮೃಗಾಲಯದಲ್ಲಿ 3 ವರ್ಷದ ಮಗುವಿನ ಮೇಲೆ ಹುಲಿಯೊಂದು ಬುಧವಾರ ದಾಳಿ ಮಾಡಿದ್ದು, ಗಾಯಗೊಂಡ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
`ಛಾಯಾಚಿತ್ರ ತೆಗೆಯಲು ಪೋಷಕರು ತಮ್ಮ ಮಗುವನ್ನು ಹುಲಿ ಬೋನಿಗೆ ತೀರ ಸನಿಹದಲ್ಲಿ ನಿಲ್ಲಿಸಿದ್ದರು. ಆಗ ಹುಲಿ ಮಗುವಿನ ಮೇಲೆ ದಾಳಿ ಮಾಡಿದೆ~ ಎಂದು ಪ್ರಾಂತೀಯ ಭದ್ರತಾ ಇಲಾಖೆಯ ವಕ್ತಾರರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.