ಕೊಲಂಬೊ(ಐಎಎನ್ಎಸ್): ಸಮುದ್ರದಲ್ಲಿ ಮೀನುಗಾರಿಕೆ ಹಕ್ಕಿನ ಕುರಿತು ಭಾರತ ಮತ್ತು ಶ್ರೀಲಂಕಾ ನಡುವೆ ಮಾತುಕತೆ ನಡೆಯಲು ಇನ್ನೊಂದು ವಾರವಿರುವಾಗ ಶ್ರೀಲಂಕಾದ ನೌಕಾಪಡೆ ಒಂಬತ್ತು ಭಾರತೀಯ ಮೀನುಗಾರರನ್ನು ಬಂಧಿಸಿದೆ.
ಇದರಿಂದ ಕಳೆದ ಎರಡು ದಿನಗಳಲ್ಲಿ ಬಂಧನಕ್ಕೊಳಗಾದ ಭಾರತೀಯ ಮೀನುಗಾರರ ಸಂಖ್ಯೆ 41ಕ್ಕೇರಿದೆ.
ಶ್ರೀಲಂಕಾ ನೌಕಾಪಡೆಯ ವಕ್ತಾರ ಕೋಸಲ ವರ್ಣ ಕುಲಸೂರಿಯ ಪ್ರಕಾರ, ಈ ಅಕ್ರಮ ಮೀನುಗಾರರು ಮತ್ತು ಬಲೆಗಾರರನ್ನು ಶ್ರೀಲಂಕಾದ ಉತ್ತರ ಸಮುದ್ರದಲ್ಲಿ ಬಂಧಿಸಿ ಲಂಕಾ ಪೋಲೀಸರ ವಶಕ್ಕೆ ಒಪ್ಪಿಸಲಾಗಿದೆ.
ಮೀನುಗಾರಿಕೆ ಹಕ್ಕು ಕುರಿತು ಉಭಯ ದೇಶಗಳ ನಡುವೆ ಎರಡನೇ ಸುತ್ತಿನ ಮಾತುಕತೆ ಮಾರ್ಚ್ 13 ರಂದು ಕೊಲಂಬೊದಲ್ಲಿ ನಡೆಯಲಿರುವ ಸಂದರ್ಭದಲ್ಲಿ ಈ ಪ್ರಕರಣ ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.