ಇಸ್ಲಾಮಾಬಾದ್ (ಪಿಟಿಐ): ಪಾಕಿಸ್ತಾನದ ಹೆಣ್ಣುಮಕ್ಕಳ ಶಿಕ್ಷಣ ಹಕ್ಕುಗಳ ಹೋರಾಟಗಾರ್ತಿ ಮಲಾಲಾ ಯೂಸೂಫ್ಝೈ ಮತ್ತು ಪಾಕ್ ಕ್ರಿಕೆಟ್ ತಂಡದ ನಾಯಕ ಮಿಸ್ಬಾ ಉಲ್ಹಕ್ ಸೇರಿದಂತೆ 105 ಜನರಿಗೆ ಪಾಕಿಸ್ತಾನ ಸರ್ಕಾರ ನಾಗರಿಕ ಪ್ರಶಸ್ತಿ ನೀಡಿ ಗೌರವಿಸುತ್ತಿದೆ.
ಅಧ್ಯಕ್ಷ ಮಮ್ನೂನ್ ಹುಸೇನ್ ಕಳೆದ ವರ್ಷ ಆಗಸ್ಟ್ 14ರಂದೇ 105 ಜನರಿಗೆ ನಾಗರಿಕ ಪ್ರಶಸ್ತಿ ನೀಡುವುದಕ್ಕೆ ಒಪ್ಪಿಗೆ ಸೂಚಿಸಿದ್ದರು.
ವಿಶೇಷ ಪ್ರಕರಣಗಳಲ್ಲಿ ಇನ್ನೂ 10 ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಭಾನುವಾರ ಐವಾನೆ ಸಾದ್ರದಲ್ಲಿ ನಡೆಯುವ ಸಮಾರಂಭದಲ್ಲಿ ಮಮ್ನೂನ್ ಹುಸೇನ್ ಅವರು ಐವರು ವಿದೇಶಿಯರೂ ಸೇರಿದಂತೆ 39 ಜನರಿಗೆ ರಾಷ್ಟ್ರೀಯ ನಾಗರಿಕ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ಲಂಡನ್‌ನಲ್ಲಿನ ಪಾಕಿಸ್ತಾನದ ನಿಯೋಗದ ಮೂಲಕ ಮಲಾಲಾಗೆ ಪ್ರಶಸ್ತಿಯನ್ನು ನೀಡುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.