ADVERTISEMENT

ಮಲೇರಿಯಾಕ್ಕೆ ಹೊಸ ಲಸಿಕೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2013, 19:30 IST
Last Updated 1 ಡಿಸೆಂಬರ್ 2013, 19:30 IST

ಲಂಡನ್‌ (ಪಿಟಿಐ): ಪ್ರಾಣಕ್ಕೆ ಕುತ್ತು­ತರುವ ಮಲೇರಿಯಾದ ವಿರುದ್ಧ ಪರಿಣಾಮಕಾರಿಯಾಗಿ ಕಾರ್ಯ­ನಿರ್ವಹಿ­ಸುವ ಲಸಿಕೆಯನ್ನು ಆಕ್ಸ್‌ಫರ್ಡ್‌ ವಿಜ್ಞಾನಿಗಳು ಅಭಿವೃದ್ಧಿ ಪಡಿಸಿದ್ದಾರೆ.

ಪ್ರಾಥಮಿಕವಾಗಿ ನಡೆದ ವೈದ್ಯಕೀಯ ಪರೀಕ್ಷೆಗಳಲ್ಲಿ ಹೊಸ ಲಸಿಕೆಯು ಭರವಸೆಯ ಫಲಿತಾಂಶಗಳನ್ನು ನೀಡಿದೆ. ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ಜೆನ್ನರ್‌ ಇನ್‌ಸ್ಟಿಟ್ಯೂಟ್‌ನ ಪ್ರೊಫೆಸರ್‌ ಆ್ಯಡ್ರಿಯನ್‌ ಹಿಲ್‌ ನೇತೃತ್ವದ ತಂಡವು ಜೈವಿಕ ತಂತ್ರಜ್ಞಾನ ಸಂಸ್ಥೆ ‘ಒಕೈರೊಸ್‌’   ಸಿಬ್ಬಂದಿಗಳ ಜೊತೆ ಸೇರಿ ಹೊಸ ಲಸಿಕೆಯ ಪರೀಕ್ಷೆ ನಡೆಸಿದೆ.

ಲಸಿಕೆಯ ಸಾಮರ್ಥ್ಯ ಪರೀಕ್ಷೆಯ ಭಾಗವಾಗಿ ಲಸಿಕೆಯನ್ನು ಹಾಕಿಸಿಕೊಂಡ ಕೆಲವು ಸ್ವಯಂ ಸೇವಕರಿಗೆ ಮಲೇರಿಯಾ ಸೋಂಕು ತಗುಲಿಲ್ಲ ಎಂದು ಅಧ್ಯಯನ­ಕಾರರು ಹೇಳಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.