ADVERTISEMENT

ಮಹಿಳಾ ನಗರ!

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2012, 19:30 IST
Last Updated 13 ಆಗಸ್ಟ್ 2012, 19:30 IST

ಲಂಡನ್ (ಪಿಟಿಐ): ಮಹಿಳೆಯರಿಗಾಗಿಯೇ ವಿಶೇಷವಾಗಿ ಭೂಪ್ರದೇಶವೊಂದನ್ನು ನಿರ್ಮಿಸಲು ಸೌದಿ ಅರೇಬಿಯಾ ಯೋಜನೆ ರೂಪಿಸಿದೆ.

ದೇಶವನ್ನು ಆಧುನಿಕತೆಯಿಂದ ಹೊರತಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಮಹಿಳಾ ನಗರವೊಂದರ ನಿರ್ಮಾಣಕ್ಕೆ ಸೌದಿ ಕೈಗಾರಿಕಾ ಸಂಪನ್ಮೂಲ ಪ್ರಾಧಿಕಾರವು ಮುಂದಿನ ವರ್ಷ ಚಾಲನೆ ನೀಡಲಿದೆ ಎಂದು ಇಲ್ಲಿನ ಮಾಧ್ಯಮಗಳು ತಿಳಿಸಿವೆ.

ನಿರ್ಮಾಣವಾಗಲಿರುವ ಮಹಿಳಾ ನಗರದಲ್ಲಿ ಮಹಿಳೆಯರಿಗೆ ಯಾವುದೇ ಶರಿಯತ್ ಕಾನೂನುಗಳು ಅನ್ವಯವಾಗದೆ ಅವರ ಇಚ್ಛೆಯಂತೆ ಬದುಕಲು ಅವಕಾಶ, ಕೈಗಾರಿಕೆಗಳಲ್ಲಿ ಕೆಲಸ ನಿರ್ವಹಿಸಲು ಸ್ವಾತಂತ್ರ್ಯವಿದೆ ಎಂದು ಮೂಲಗಳು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.