ADVERTISEMENT

ಮಾಲೆ ನಿಲ್ದಾಣ ಹಸ್ತಾಂತರ ಆರಂಭ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2012, 22:00 IST
Last Updated 8 ಡಿಸೆಂಬರ್ 2012, 22:00 IST

ಮಾಲೆ (ಪಿಟಿಐ):  ಭಾರತ ಮೂಲದ ಜಿಎಂಆರ್ ಕಂಪೆನಿ ಸ್ವಾಮ್ಯದಲ್ಲಿದ್ದ ಮಾಲೆ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿ ಗುತ್ತಿಗೆ ಯನ್ನು ಮಾಲ್ಡೀವ್ಸ್ ಸರ್ಕಾರಿ ಸ್ವಾಮ್ಯದ ಎಂಎಸಿಎಲ್ ಕಂಪೆನಿಗೆ ಹಸ್ತಾಂತರಿಸುವ ಕಾರ್ಯ ಆರಂಭ ವಾಗಿದೆ.

ವಿಮಾನ ನಿಲ್ದಾಣವನ್ನು ವಶಕ್ಕೆ ಪಡೆಯುವ ಹಕ್ಕು ಮಾಲ್ಡೀವ್ಸ್‌ಗೆ ಇದೆ ಎಂದು ಸಿಂಗಪುರ ನ್ಯಾಯಾಲಯ ಗುರುವಾರ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಈ ಹಸ್ತಾಂತರ ಪ್ರಕ್ರಿಯೆ ಶುರುವಾಗಿದೆ.

`ಹಸ್ತಾಂತರ ಪ್ರಕ್ರಿಯೆ ಮೂರು ವಾರ ಕಾಲ ನಡೆಯಲಿದ್ದು, ಈ ಪ್ರಕ್ರಿಯೆ ಸರಾಗವಾಗಿ ನಡೆಯಲಿದೆ. ಹಸ್ತಾಂತರ ಪ್ರಕ್ರಿಯೆಯಲ್ಲಿ ಜಿಎಂಆರ್ ಕಂಪೆನಿ ಕೂಡ ಭಾಗಿಯಾಗಲು ಒಪ್ಪಿಕೊಂಡಿದೆ' ಎಂದು ಮಾಲ್ಡೀವ್ಸ್ ಅಧ್ಯಕ್ಷ ಮೊಹಮದ್ ವಹೀದ್ ಅವರ ಪತ್ರಿಕಾ ಕಾರ್ಯದರ್ಶಿ ಮಸೂದ್ ಇಮಾದ್ ಹೇಳಿದ್ದಾರೆ.
ಜಿಎಂಆರ್ ಕಂಪೆನಿಯ ಪ್ರಮುಖ ಅಧಿಕಾರಿ ಕಿರಣ್ ಕುಮಾರ್ ಗ್ರ್ಯಾಂಡಿ ಶೀಘ್ರವೇ ಮಾಲ್ಡೀವ್ಸ್ ಅಧ್ಯಕ್ಷರನ್ನು ಭೇಟಿ ಮಾಡಿ ಹಸ್ತಾಂತರ ಕುರಿತು ಮಾತನಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.